Job Description: * ಪ್ರಸ್ತುತ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇದೀಗ ಒಂದು ವರ್ಷದವರೆಗೆ ಗುಟ್ಖಾ ಪಾನ್ ಮಸಾಲವನ್ನು ತಯಾರಿಕೆ, ಮಾರಾಟ ಮಾಡುವುದನ್ನು ನಿಷೇಧಿಸಿದೆ. * ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಿಂದಾಗಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಈ ಆದೇಶ ಹೊರಡಿಸಿದೆ. * ಈ ಒಂದು ವರ್ಷದವರೆಗೆ ಗುಟ್ಖಾ ಪಾನ್ ಮಸಾಲವನ್ನು ತಯಾರಿಕೆ, ಮಾರಾಟ ಮಾಡುವುದನ್ನು ನಿಷೇಧಿಸಿದ ಆದೇಶವು ಇದೇ 2021 ರ ನವೆಂಬರ್. 7 ರಿಂದ ಜಾರಿಗೆ ಬರಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ. * ಪಶ್ಚಿಮ ಬಂಗಾಳ ರಾಜ್ಯ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಆಯೋಗವು ಗುಟ್ಖಾ ಮತ್ತು ತಂಬಾಕು ಉತ್ಪನ್ನಗಳ ಉತ್ಪಾದನೆ, ಹಾಗೂ ಮಾರಾಟ ಮಾಡಲು ನಿಷೇಧವನ್ನು ಹೇರಿದೆ. * ಗುಟ್ಖಾ ಹಾಗೂ ಪಾನ್ ಮಸಾಲ ಉತ್ಪನ್ನಗಳ ತಯಾರಿಕೆಯಲ್ಲಿ ತಂಬಾಕು ಹಾಗೂ ನಿಕೋಟಿನ್ ಪದಾರ್ಥಗಳ ಬಳಕೆಯನ್ನು ಅತೀ ಹೆಚ್ಚಾಗಿ ಕಂಡು ಬರುತ್ತಿದೆ, ಈ ಹಿನ್ನಲೆಯಿಂದಾಗಿ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಕೆಲ ರಾಜ್ಯಗಳು ನಿಕೋಟಿನ್ ಹೊಂದಿರುವ ಉತ್ಪನ್ನಗಳನ್ನು ನಿಷೇಧಿಸಿವೆ. * ಈ ಹಿಂದೆ 2013 ರಲ್ಲಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಗೆ ಪಾನ್ ಮಸಾಲ, ಗುಟ್ಕಾ, ಖೈನಿಗೆ ನಿಷೇದ ಹೇರಿತ್ತು.