Job Description: * ಪ್ರಸ್ತುತ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಇದೀಗ ರಾಜ್ಯದಲ್ಲಿ ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಇದೀಗ ರಾಜ್ಯದಲ್ಲಿ ಉಚಿತ ಶಿಕ್ಷಣ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. * ಪ್ರಸ್ತುತ ಹರಿಯಾಣ ರಾಜ್ಯದಲ್ಲಿನ ಕುಟುಂಬಗಳ ವಾರ್ಷಿಕ ಆದಾಯವು 1.80 ಲಕ್ಷ ರೂ. ಗಿಂತ ಕಡಿಮೆಯಾಗಿದ್ದಾರೆ, ಈ ಕುಟುಂಬಗಳಿಗಾಗಿ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. * ಈ ಯೋಜನೆಯನ್ನು ಹರ್ಯಾಣದ 'ಸೂಪರ್ 100 ಕಾರ್ಯಕ್ರಮ' ಅಡಿಯಲ್ಲಿ ಘೋಷಣೆ ಮಾಡಿದ್ದಾರೆ. *ಹೊಸ ಶಿಕ್ಷಣ ನೀತಿ NEP -2020 ರ ಪ್ರಕಾರ, ಹರಿಯಾಣ ರಾಜ್ಯವು ಸಂಸ್ಥೆಗಳನ್ನು ಸ್ಥಾಪನೆ ಮಾಡುತ್ತಿದೆ, ಈ ಸಂಸ್ಥೆಗಳು ಸ್ನಾತಕೋತ್ತರ ಹಂತದವರೆಗಿನ ಶಿಕ್ಷಣವನ್ನು ನೀಡುತ್ತವೆ ಎಂದು ತಿಳಿಸಿದ್ದಾರೆ, ಪ್ರಾರಂಭದಲ್ಲಿ ಈ ಯೋಜನೆಯನ್ನು 4 ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಹರಿಯಾಣ ರಾಜ್ಯ ಸರ್ಕಾರವು ಆನ್ಲೈನ್ ಶಿಕ್ಷಕರ ವರ್ಗಾವಣೆ ನೀತಿಯನ್ನು NEP 2020 ಅಡಿಯಲ್ಲಿ ಪ್ರಾರಂಭಿಸಿದೆ, ಇದರಿಂದಾಗಿ ಶೇ. 90 ರಷ್ಟು ಶಿಕ್ಷಕರು ತೃಪ್ತರಾಗಿದ್ದಾರೆ ಎಂದು ತಿಳಿದು ಬಂದಿದೆ. * ರಾಷ್ಟ್ರೀಯ ಶಿಕ್ಷಣ ನೀತಿ (NEP) 2020: ಶಿಕ್ಷಣ ಸಚಿವಾಲಯವು 21 ನೇ ಶತಮಾನದ ಶಿಕ್ಷಣದ ಅಗತ್ಯಗಳನ್ನು ಪೂರೈಸಲು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಗುರಿಯನ್ನು ಘೋಷಣೆ ಮಾಡಿದೆ.