Job Description: * ಇದೇ ಡಿಸೆಂಬರ್. 1ರಿಂದ ಅನ್ವಯ ಆಗುವಂತೆ ಬೆಂಕಿಪೊಟ್ಟಣದ ಬೆಲೆಯು 2 ರೂ.ಗೆ ಏರಿಕೆಯಾಗಲಿದೆ, ಸದ್ಯ ಬೆಂಕಿಪೊಟ್ಟಣದ ಬೆಲೆ 1 ರೂಪಾಯಿ ಇದೆ. * ಪ್ರಸ್ತುತ ಬೆಂಕಿಕಡ್ಡಿ ಉತ್ಪಾದನೆಯ ವೆಚ್ಚವು ಹೆಚ್ಚಾಗಿರುವ ಹಿನ್ನಲೆಯಿಂದಾಗಿ ಬೆಂಕಿಪೊಟ್ಟಣ ಉತ್ಪಾದನಾ ಕಂಪನಿಗಳು ಬೆಲೆ ಏರಿಕೆಗೆ ಸಿದ್ಧವಾಗಿವೆ. * ಇದಕ್ಕೂ ಮೊದಲು 2007 ರಲ್ಲಿ ಬೆಂಕಿಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂ.ಗೆ ಏರಿಕೆ ಮಾಡಲಾಗಿತ್ತು. * ಈ ಮೊದಲು 1 ರೂ. ಬೆಲೆಯ ಬೆಂಕಿಪೊಟ್ಟಣದಲ್ಲಿ 36 ಬೆಂಕಿಕಡ್ಡಿಗಳು ಲಭ್ಯವಿದ್ದವು, ಇದೀಗ 2 ರೂ. ಬೆಲೆಯ ಬೆಂಕಿ ಪೊಟ್ಟಣದಲ್ಲಿ 50 ಬೆಂಕಿಕಡ್ಡಿಗಳು ಲಭ್ಯವಾಗಲಿವೆ ಎಂದು ಬೆಂಕಿಪೊಟ್ಟಣ ಉತ್ಪಾದನಾ ಕಂಪನಿಗಳು ತಿಳಿಸಿವೆ.