Job Description: * ಕರ್ನಾಟಕ ರಾಜ್ಯವು ಪ್ರತಿ ವರ್ಷವು ಅಕ್ಟೋಬರ್. 23 ರಂದು 'ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು' ಆಚರಿಸುತ್ತದೆ. * ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 2021 ರಲ್ಲಿ 50 ಕೋಟಿ ರೂಪಾಯಿ ಮಂಜೂರು ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ತಿಳಿಸಿದ್ದಾರೆ. * ಈ ಹಿಂದೆ 1778 ರ ಅಕ್ಟೋಬರ್. 23 ರಂದು ಕಿತ್ತೂರು ಚೆನ್ನಮ್ಮ ಅವರು ಜನಿಸಿದರು, ಇವಳು ಕಿತ್ತೂರಿನ ರಾಣಿಯಾಗಿದ್ದಳು, ಕಿತ್ತೂರು ಇದೊಂದು ಕರ್ನಾಟಕದಲ್ಲಿನ ರಾಜಪ್ರಭುತ್ವವಾಗಿತ್ತು. * ಕಿತ್ತೂರು ರಾಜಪ್ರಭುತ್ವವು 1824 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸಶಸ್ತ್ರ ದಂಗೆಯನ್ನು ನಡೆಸಿತು, ಈ ಸಂಧರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರನ್ನು ಸೋಲಿಸಿದಳು, ಆದರೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 2 ನೇ ಬಂಡಾಯದ ಸೆರೆವಾಸದಲ್ಲಿ ಮರಣ ಹೊಂದಿದಳು. * ಕಿತ್ತೂರು ಪ್ರದೇಶವು ಕರ್ನಾಟಕದ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಪ್ರದೇಶವಾಗಿದೆ, ಈ ಮೊದಲು ಕಿತ್ತೂರು ಬೈಲಹೊಂಗಲ ತಾಲೂಕಿನ ಪ್ರದೇಶವಾಗಿತ್ತು, ಆದರೆ 2012 ರ ಅಕ್ಟೋಬರ್. 23 ರಂದು ಇದನ್ನು ಸ್ವತಂತ್ರ ತಾಲೂಕನ್ನಾಗಿ ಘೋಷಣೆ ಮಾಡಲಾಗಿತ್ತು, ಆಗ ಇದು ಕರ್ನಾಟಕ ರಾಜ್ಯದ 177 ನೇ ತಾಲೂಕಾಗಿ ಹೊರ ಹೊಮ್ಮಿತು.