Job Description: * ಕೇಂದ್ರ ಗೃಹ ಸಚಿವ 'ಅಮಿತ್ ಶಾ' ಅವರು ಇತ್ತೀಚಿಗೆ ಜಮ್ಮು&ಕಾಶ್ಮೀರಕ್ಕೆ 3 ದಿನಗಳ ಪ್ರವಾಸವನ್ನು ಕೈಗೊಂಡಿದ್ದರು, ಈ ಸಂಧರ್ಭದಲ್ಲಿ ಶ್ರೀನಗರದ ಶೇಖ್ ಉಲ್-ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶ್ರೀನಗರ-ಶಾರ್ಜಾ ಅಂತರಾಷ್ಟ್ರೀಯ ವಿಮಾನಯಾನವನ್ನು ಉದ್ಘಾಟಿಸಿದರು. * ಈ ಶ್ರೀನಗರ-ಶಾರ್ಜಾ ಅಂತರಾಷ್ಟ್ರೀಯ ವಿಮಾನಯಾನವು, ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ, ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚಿನ ಹೂಡಿಕೆಯನ್ನು ತರಲು ಸಹಾಯ ಮಾಡಲಿದೆ ಎಂದು ತಿಳಿಸಿದರು. * ಪ್ರಸ್ತುತ ವಾಡಿಯಾ ಗ್ರೂಪ್-ರನ್ ಏರ್ಲೈನ್ಸ್ ಗೋ ಫಸ್ಟ್, UAE ಯ ಶಾರ್ಜಾಗೆ ನೇರ ಪ್ರಯಾಣಿಕ ಸೇವೆಗಳನ್ನು ಶ್ರೀನಗರದಿಂದ ಪ್ರಾರಂಭಿಸಿತು, ಅಷ್ಟೇ ಅಲ್ಲದೇ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯಿಂದ ನೇರ ಅಂತರರಾಷ್ಟ್ರೀಯ ಸಂಪರ್ಕವನ್ನು ಕಲ್ಪಿಸಿದ ಮೊದಲ ದೇಶೀಯ ವಿಮಾನಯಾನ ಇದಾಗಿದೆ. * ಈ ಹೊಸ ವಿಮಾನಯಾನ ಸೇವೆಯು ಶಾರ್ಜಾ- ಶ್ರೀನಗರ, ಅಷ್ಟೇ ಅಲ್ಲದೇ ಚಂಡೀಗಢ , ದೆಹಲಿ, ಜಮ್ಮು, ಲೇಹ್ ಹಾಗೂ ಮುಂಬೈ ನಗರಗಳಿಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸಲಿದೆ ಎಂದು ವಿಮಾನಯಾನ ಸಂಸ್ಥೆಯು ತಿಳಿಸಿದೆ.