Job Description: * ಚೀನಾ ದೇಶದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆ ಉಲ್ಲಂಘಣೆ ಮಾಡಲಾಗದು ಎಂದು ಪ್ರತಿಪಾದಿಸಿದ ದೇಶದ ರಾಷ್ಟ್ರೀಯ ಶಾಸಕಾಂಗವು ಭೂ ಗಡಿ ಪ್ರದೇಶಗಳ ರಕ್ಷಣೆ ಮತ್ತು ಶೋಷಣೆಯ ಬಗ್ಗೆ ಹೊಸ ಕಾನೂನನ್ನು ಅಂಗೀಕರಿಸಿದೆ. * ಚೀನಾ ಅಂಗೀಕರಿಸಿದ ಈ ಹೊಸ ಕಾನೂನು ಭಾರತವು ಚೀನಾದೊಂದಿಗೆ ಹಂಚಿಕೊಂಡಿರುವ ಗಡಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. * ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ (NPC) ಸ್ಥಾಯಿ ಸಮಿತಿಯ ಸದಸ್ಯರು ಶಾಸಕಾಂಗ ಅಧಿವೇಶನದ ಸಭೆಯಲ್ಲಿ ಈ ಕಾನೂನನ್ನು ಅನುಮೋದಿಸಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ವಾಹಿನಿ ಮಾಹಿತಿ ನೀಡಿದೆ. * ಈ ಹೊಸ ಕಾನೂನು ಮುಂಬರುವ ಜನೇವರಿ 1 ರಿಂದ ಜಾರಿಯಾಗಲಿದೆ, ಈ ಕಾನೂನು ದೇಶದ ಗಡಿಗಳಿಗೆ ಶಕ್ತಿ ತುಂಬಲಿದೆ, ಹಾಗೂ ಗಡಿ ಪ್ರದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ ಎಂದು ಚೀನಾ ತಿಳಿಸಿದೆ. * ಇದೀಗ ಚೀನಾ ದೇಶವು ಇದೀಗ 12 ದೇಶಗಳೊಂದಿಗೆ ಇರುವಂತಹ ಗಡಿ ವಿವಾದವನ್ನು ಬಗೆಹರಿಸಿಕೊಂಡಿದೆ, ಆದರೆ ಭಾರತ ಮತ್ತು ಭೂತಾನ್ ದೇಶಗಳ ಗಡಿ ಒಪ್ಪಂದಗಳನ್ನು ಅಂತಿಮಗೊಳಿಸಿಲ್ಲ ಎಂದು ತಿಳಿದು ಬಂದಿದೆ.