Job Description: * ಪ್ರಸ್ತುತ ಕೇಂದ್ರ ಸರ್ಕಾರವು 2014 ರ ಪ್ರಾರಂಭದಿಂದ ಹಿಡಿದು 157 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿಯನ್ನು ನೀಡಿದೆ, ಈ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಗಳಿಗೆ 17,691 ಕೋಟಿ ವೆಚ್ಚವನ್ನು ಭರಿಸಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. * ದೇಶದಲ್ಲಿ ಈ ಕಾಲೇಜುಗಳು ಪ್ರಾರಂಭವಾದಾಗ ಹೊಸದಾಗಿ 16 ಸಾವಿರ ವೈದ್ಯಕೀಯ ಸೀಟುಗಳು ಸೇರ್ಪಡೆಯಾಗಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. * ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಇದೀಗ 64 ಕಾಲೇಜುಗಳು ಪ್ರಾರಂಭವಾಗಿವೆ, ಈ ಕಾಲೇಜುಗಳಿಂದ ಸದ್ಯ 6,500 ವೈದ್ಯಕೀಯ ಸೀಟುಗಳು ಲಭ್ಯವಾಗಿವೆ ಎಂದು ಸಚಿವಾಲಯವು ವರದಿ ಮಾಡಿದೆ. * ಕೇಂದ್ರ ಸರ್ಕಾರವು ಇದೀಗ ದೇಶದಲ್ಲಿನ ಯಾವ ಜಿಲ್ಲೆಗಳಲ್ಲಿ ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳು ಇಲ್ಲವೂ ಈ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತದೆ, ಅದರಲ್ಲಿ ಅತೀ ಹೆಚ್ಚಾಗಿ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತದೆ, ಈ ಈಶಾನ್ಯ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಸರ್ಕಾರವು ಶೇ. 90 ರಷ್ಟು ಹಾಗೂ ರಾಜ್ಯ ಶೇ. 10 ರಷ್ಟು ಹಣಕಾಸು ನೀಡಲಿವೆ ಎಂದು ತಿಳಿಸಿದೆ.