Job Description: * ಮಿಂತ್ರ (Myntra) ಮುಖ್ಯ ಕಾರ್ಯನಿರ್ವಾಹಕ (CEO) ಅಧಿಕಾರಿ ಅಮರ್ ನಗರಮ್ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ, ಇವರು 3 ವರ್ಷಗಳ ಕಾಲ ಫ್ಯಾಷನ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ ನ್ನು ಮುನ್ನಡೆಸಿದ್ದರು. * ಪ್ರಸ್ತುತ CEO ಅಧಿಕಾರಿ ಅಮರ್ ನಗರಮ್ ಅವರು ಡಿಸೆಂಬರ್ ಅಂತ್ಯದವರೆಗೆ ಮಿಂತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಮಾಹಿತಿ ನೀಡಿದೆ. * ಇದೀಗ ಅಮರ್ ಅವರು ತಮ್ಮ ಸ್ವಂತ ಉದ್ಯಮವನ್ನು ಮುಂದುವರಿಸಲು, ಈ ಫ್ಲಿಪ್ಕಾರ್ಟ್ ಸಮೂಹವನ್ನು ತೊರೆಯಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ, ಅಮರ್ ನಗರಮ್ ಅವರು ಸರಿ ಸುಮಾರು 10 ವರ್ಷಗಳಿಂದ ಈ ಗುಂಪಿನ ಭಾಗವಾಗಿ ಹಾಗೂ ಫ್ಲಿಪ್ಕಾರ್ಟ್ನಲ್ಲಿನ ಬೇರೆ ಬೇರೆ ತಂಡಗಳನ್ನು ಮುನ್ನಡೆಸಿದ್ದಾರೆ. * ಮುಂದಿನ ಮಿಂತ್ರ (Myntra) ಮುಖ್ಯ ಕಾರ್ಯನಿರ್ವಾಹಕ (CEO) ಅಧಿಕಾರಿಯನ್ನು ಶೀಘ್ರದಲ್ಲಿಯೇ ತಿಳಿಸಲಿದೆ ಎಂದು ತಿಳಿಸಿದ್ದಾರೆ. * ಅಮರ್ ನಗರಮ್ ಅವರು 2019 ರಲ್ಲಿ ಮಿಂತ್ರಾ ಮತ್ತು ಜಬಾಂಗ್ ನ CEO ಆಗಿ ಅಧಿಕಾರ ವಹಿಸಿಕೊಂಡಿದ್ದರು, ಇದಕ್ಕೂ ಮುಂಚಿತವಾಗಿ ಫ್ಲಿಪ್ಕಾರ್ಟ್ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.