Job Description: * ಪ್ರಸ್ತುತ ಗ್ಲೋಬಲ್ ವಾಚ್ ಡಾಗ್ ಸಿದ್ಧ ಪಡಿಸಿರುವ ಹಣಕಾಸು ಕ್ರಿಯಾ ಯೋಜನೆಯ (FATF) 27 ಅಂಶಗಳಲ್ಲಿ 6 ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಕಾರಣದಿಂದಾಗಿ ಪಾಕಿಸ್ತಾನ ರಾಷ್ಟ್ರವನ್ನು 'ಬೂದು ಪಟ್ಟಿ'ಯಲ್ಲಿಯೇ ಮುಂದುವರಿಸಲು FATF ತೀರ್ಮಾನ ಕೈಗೊಂಡಿದೆ. * ಇತ್ತೀಚಿಗೆ ಪ್ಯಾರಿಸ್ನಲ್ಲಿ ನಡೆದ FATFನ 4 ದಿನಗಳ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ತಗೆದುಕೊಳ್ಳಲಾಗಿದೆ ಎಂದಿದ್ದಾರೆ. * ಈ FATF ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ಸಹಾಯವನ್ನು ಮಾಡುವದನ್ನು ತಡೆಯಲು ನೀಡುವುದಕ್ಕೆ ಶ್ರಮಿಸುತ್ತದೆ. *ಪ್ರಸ್ತುತ ಪಾಕಿಸ್ತಾನ ದೇಶವನ್ನು ಮುಂದಿನ ವರ್ಷ ಏಪ್ರಿಲ್ ತಿಂಗಳಿನ ವರೆಗೆ 'ಬೂದು ಪಟ್ಟಿ'ಯಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಟರ್ಕಿ, ಜೋರ್ಡಾನ್ ಹಾಗೂ ಮಾಲಿ ದೇಶಗಳನ್ನು 'ಬೂದು ಪಟ್ಟಿ'ಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ ಎಂದು FATF ತಿಳಿಸಿದೆ.