Job Description: * ಪ್ರಸ್ತುತ ನಿಪು ಕುಮಾರ್ ದಾಸ್ ಹಾಗೂ ಎನ್.ಎ. ಅರವಿಂದ್ ಎಂಬ ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ & ದ ಎನ್ವಿರಾನ್ಮೆಂಟ್ ಸಂಸ್ಥೆಯ ವಿಜ್ಞಾನಿಗಳು ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಮಾಸ್ವಮೈ ಎಂಬ ಹಳ್ಳಿಯಲ್ಲಿ ಬಸವನಹುಳುವಿನ ಹೊಸ ಪ್ರಬೇಧವನ್ನು ಪತ್ತೆ ಹಚ್ಚಿದ್ದಾರೆ. * ಬಸವನಹುಳುವಿನ ಹೊಸ ಪ್ರಭೇದವು ಈ ಹಳ್ಳಿಗಳಲ್ಲಿನ ಸುಣ್ಣದ ಕಲ್ಲಿನ ಗುಹೆಯಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ, ಹಾಗೂ ಈ ಹೊಸ ಪ್ರಭೇದಕ್ಕೆ ಜಿಯೋರಿಸ್ಸಾ ಮಾಸ್ವಮೈನಿಸ್ ಎಂದು ನಾಮಕರಣ ಮಾಡಲಾಗಿದೆ, ಅಷ್ಟೇ ಅಲ್ಲದೇ 170 ವರ್ಷಗಳ ಹಿಂದೆ ಇದೇ ಜಾತಿಗೆ ಸೇರಿರುವ 'ಜಿಯೊರಿಸ್ಸಾ ಸರಿಟಾ’ ಎಂಬ ಪ್ರಭೇದವು ಇದೇ ಪ್ರದೇಶದಲ್ಲಿ ಪತ್ತೆಯಾಗಿದ್ದವು ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ.