Job Description: * ಪ್ರಸ್ತುತ ಡೇಮ್ ಸಿಂಡಿ ಕಿರೊ ಅವರು ನ್ಯೂಝಿಲ್ಯಾಂಡ್ ನ ಗವರ್ನರ್ ಜನರಲ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಈ ಸ್ಥಾನಕ್ಕೆ ನೇಮಕಗೊಂಡ ಮೊದಲ ಮಹಿಳೆಯಾಗಿ ಇವರಾಗಿದ್ದಾರೆ. * ಡೇಮ್ ಸಿಂಡಿ ಕಿರೊ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಲಸಿಗರು ಮತ್ತು ತಾರತಮ್ಯಕ್ಕೆ ಒಳಗಾಗಿರುವ ಪ್ರಜೆಗಳಿಗೆ ನೆರವಾಗುವುದು ನನ್ನ ಆದ್ಯತೆಯಾಗಿದೆ ತಿಳಿಸಿದರು. * ಹೊಸದಾಗಿ ಬರುವ ವಲಸಿಗರು ಮತ್ತು ಈ ಮೊದಲಿನ ನಿರಾಶ್ರಿತರನ್ನು ಸಂಪರ್ಕಿಸುವ ಕಾರ್ಯವನ್ನು ಕೈಗೊಳ್ಳುತೇನೆ, ಅಷ್ಟೇ ಅಲ್ಲದೇ ನ್ಯೂಝಿಲ್ಯಾಂಡ್ ದೇಶವನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡವರು ನೀಡಿರುವ ಅನೇಕ ವಿವಿಧ ಸಂಸ್ಕತಿ ಮತ್ತು ಧರ್ಮಗಳ ಆಚರಣೆಗೆ ಸಹಾಯ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ. * ನ್ಯೂಝಿಲ್ಯಾಂಡ್ ಜನಸಂಖ್ಯೆಯ ಶೇ. 17 ಮವೋರಿ ಸಮುದಾಯ ಜನರು ಇನ್ನು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ, ಅಷ್ಟೇ ಅಲ್ಲದೇ ಈ ಸಮುದಾಯದ ಆರೋಗ್ಯ ಸಮಸ್ಯೆಗಳಿರುವ ಮಕ್ಕಳು ಸರ್ಕಾರದ ಆಶ್ರಯತಾಣದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ. * ಮವೋರಿ ಸಮುದಾಯ ಜನರು ಈ ಹಿಂದೆ 2019 ರಲ್ಲಿ ಭೂಮಿಯ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕೆ ಆಗ್ರಹಿಸಿ ಬೀದಿಗಿಳಿದಿದ್ದರು.