Job Description: * ಪ್ರಸ್ತುತ ಚೀನಾದ ಕ್ಸಿನ್ಜಿಯಾಂಗ್ನಲ್ಲಿರುವ ಉಯಿಘರ್ ಮುಸಲ್ಮಾನ ಸಮುದಾಯದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಚೀನಾ ದೇಶಕ್ಕೆ 43 ದೇಶಗಳು ಕರೆ ನೀಡಿವೆ. * ವಿಶ್ವಸಂಸ್ಥೆ ಮತ್ತು ಯೂರೋಪಿಯನ್ ಹಾಗೂ ಏಷ್ಯಾದ ಸದಸ್ಯ ರಾಷ್ಟ್ರಗಳು ಉಯಿಘರ್ ಮುಸ್ಲಿಂರ ಹಕ್ಕುಗಳನ್ನೂ ರಕ್ಷಿಸಬೇಕು ಎಂದು ಸಹಿ ಹಾಕಿವೆ, ಈ ಮಾಹಿತಿಯನ್ನು ವಿಶ್ವಸಂಸ್ಥೆಯು ಬಿಡುಗಡೆ ಮಾಡಿದೆ. * ಚೀನಾ ದೇಶವು ಉಯಿಘರ್ ಮುಸ್ಲಿಂ ಸಮುದಾಯದ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. * ಚೀನಾ ದೇಶದ ಕ್ಸಿನ್ಜಿಯಾಂಗ್ ಪ್ರಾಂತ್ಯವನ್ನು ಪ್ರವೇಶಿಸಲು, ಹಾಗೂ ಅಲ್ಲಿನ ಅರ್ಥಪೂರ್ಣ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗದ ಹೈಕಮಿಷನರ್ ತಿಳಿಸಿದ್ದಾರೆ. * ಚೀನಾ ದೇಶವು ಈ ಆರೋಪಗಳನ್ನು ಮೊದಲಿನಿಂದಲೂ ನಿರಾಕರಿಸುತ್ತಿದೆ, ಪ್ರಸ್ತುತ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಅತೀ ಹೆಚ್ಚು ಮುಸಲ್ಮಾನರು, ಹಾಗೂ ಟರ್ಕಿಕ್ ಜನರೇ ಹೆಚ್ಚಾಗಿದ್ದಾರೆ, ಸದ್ಯ ಲಭ್ಯ ವಿರುವ ಮಾಹಿತಿಯ ಪ್ರಕಾರ 10 ಲಕ್ಷಕ್ಕೂ ಹೆಚ್ಚು ಜನರನ್ನು ಇಂತಹ ಶಿಬಿರಗಳಲ್ಲಿ ಹಿಡಿದಿಡಲಾಗಿದೆ ಎಂದು ತಿಳಿದು ಬಂದಿದೆ.