Job Description: * ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಅಕ್ಟೋಬರ್. 29 ರಿಂದ 31 ರವರೆಗೆ ಇಟಲಿಗೆ ಪ್ರಯಾಣ ಬೆಳಸಲಿದ್ದಾರೆ, ಆ ಭೇಟಿಯ ಸಂಧರ್ಭದಲ್ಲಿ ಅಂದರೆ ಅಕ್ಟೋಬರ್ 30 ಮತ್ತು 31 ರಂದು ಜರುಗುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. * ಈ ಜಿ20 ಶೃಂಗಸಭೆಯ ನಂತರ ಪ್ರಧಾನಿ ಮೋದಿ ಯುಕೆ ಹಾಗೂ ಸ್ಕಾಟ್ಲೆಂಡ್ ಗೆ ಪ್ರಯಾಣ ಬೆಳಸಲಿದ್ದಾರೆ, ನಂತರ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಜರುಗುವ ಕಾಪ್ 26 ಹವಾಮಾನ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. * ಪ್ರಸ್ತುತ ಬ್ರಿಟನ್ ದೇಶವು ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಹಮ್ಮಿಕೊಳ್ಳಲಿರುವ ಕಾಪ್ 26 ಪಕ್ಷಗಳ ಸಮ್ಮೇಳನವು ಇದೇ ಅಕ್ಟೋಬರ್. 31 ರಿಂದ ನವೆಂಬರ್ 12 ರವರೆಗೆ ನಡೆಯಲಿದೆ, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ ಎಂದು ಭಾರತ ಸರ್ಕಾರವು ತಿಳಿಸಿದೆ.