Job Description: * ಪ್ರಸ್ತುತ ಜಪಾನ್ನ ಮೌಂಟ್ ಅಸೋ ಜ್ವಾಲಾಮುಖಿ ಸ್ಫೋಟಗೊಂಡು ಸಾವಿರಾರು ಮೀ.ಗಳಷ್ಟು ಬೂದಿಯ ಆಕಾಶಕ್ಕೆ ಚಿಮ್ಮಿದೆ, ಆದರೆ ಇಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ. * ಈ ಜ್ವಾಲಾಮುಖಿಯು 3,500 ಮೀಟರ್ ಎತ್ತರದವರೆಗೆ ಬೂದಿಯನ್ನು ಚಿಮ್ಮಿದೆ. * ಈ ಹಿಂದೆ 2016 ರಲ್ಲಿ ಮೌಂಟ್ ಅಸೊ ಸ್ಫೋಟಗೊಂಡಿತು. * ಮೌಂಟ್ ಅಸೋ ಇದೊಂದು ಜಪಾನ್'ನ ಅತಿದೊಡ್ಡ ಸಕ್ರಿಯ ಜ್ವಾಲಾಮುಖಿಯಾಗಿದೆ, ಅಷ್ಟೇ ಅಲ್ಲದೇ ಇದೊಂದು ಪ್ರಪಂಚದಾದ್ಯಂತದ ದೊಡ್ಡ ಜ್ವಾಲಾಮುಖಿಯಾಗಿದೆ, ಹಾಗೂ ಇದು ಕ್ಯುಶು ದ್ವೀಪದಲ್ಲಿದೆ, ಈ ಮೌಂಟ್ ಅಸೋ ಸಮುದ್ರ ಮಟ್ಟದಿಂದ 1,592 ಮೀಟರ್ ಎತ್ತರದಲ್ಲಿದೆ ಎಂದು ತಿಳಿಸಿದ್ದಾರೆ. * ವಿಶ್ವದ ಸಕ್ರಿಯ ಜ್ವಾಲಾಮುಖಿ ದೇಶಗಳಲ್ಲಿ ಜಪಾನ್ ಕೂಡ ಒಂದು, ಹಾಗೂ ಇದು ಪೆಸಿಫಿಕ್ 'ರಿಂಗ್ ಆಫ್ ಫೈರ್'ನಲ್ಲಿದೆ, ಪ್ರಸ್ತುತ ಜಪಾನಿನಲ್ಲಿ ದೊಡ್ಡ ಪ್ರಮಾಣದ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗೊಂಡಿರುವ ದಾಖಲೇಗಳಿವೆ. * ಈ ಹಿಂದೆ 2014 ರ ಸೆಪ್ಟೆಂಬರ್'ನಲ್ಲಿ ಮೌಂಟ್ ಒಂಟೇಕ್ ಅನಿರೀಕ್ಷಿತವಾಗಿ ಸ್ಫೋಟಗೊಂಡಿತು, ಇದರಲ್ಲಿ 63 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. * ಜಪಾನ ದೇಶದ 5 ಮುಖ್ಯ ದ್ವೀಪಗಳಲ್ಲಿ ಕ್ಯುಶು ದ್ವೀಪವು 3ನೇ ಅತಿದೊಡ್ಡ ದ್ವೀಪವಾಗಿದೆ.