Job Description: * ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್. 21 ರಂದು ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಣೆ ಮಾಡಲಾಗುತ್ತದೆ, ಪ್ರಸ್ತುತ ಈ ದಿನವನ್ನು 1959 ರಲ್ಲಿನ ಚೀನಾದ ಗುಂಡಿನ ದಾಳಿಯಲ್ಲಿ ಮೃತಪಟ್ಟ 10 ಪೊಲೀಸರ ತ್ಯಾಗಕ್ಕೆ ಅರ್ಪಿಸಲಾಗಿದೆ. * ಚೀನಾ ದೇಶದ ಪಡೆಗಳು 1959 ರ ಅಕ್ಟೋಬರ್. 21 ರಂದು ಲಡಾಖ್ನಲ್ಲಿ ಗ್ರೆನೇಡ್ಗಳನ್ನು ಎಸೆದು 20 ಭಾರತೀಯ ಸೈನಿಕರ ಮೇಲೆ ಗುಂಡು ಹಾರಿಸಿ ದಾಳಿ ನಡೆಸಿದರು, ಅವರಲ್ಲಿ 10 ಜನ ಪೊಲೀಸ್ ಸಿಬ್ಬಂದಿ ಹುತಾತ್ಮರಾದರು, ತದನಂತರ ಚೀನಾ ದೇಶವು ಒಂದು ತಿಂಗಳಿನ ನಂತರ ಅಂದರೆ 1959 ರ ನವೆಂಬರ್. 28 ರಂದು ಹುತಾತ್ಮರಾಗಿರುವ ಪೊಲೀಸರ ಮೃತ ದೇಹಗಳನ್ನು ಭಾರತಕ್ಕೆ ಹಸ್ತಾಂತರಿಸಿದರು, ಈ ಹಿನ್ನಲೆಯಿಂದಾಗಿ ಅಕ್ಟೋಬರ್. 21'ನ್ನು ಪೊಲೀಸ್ ಸ್ಮರಣಾರ್ಥ ದಿನ ಎಂದು ಆಚರಣೆ ಮಾಡಲಾಗುತ್ತಿದೆ. * ಚಾಣಕ್ಯಪುರಿಯ ಪೋಲಿಸ್ ಸ್ಮಾರಕದಲ್ಲಿ ರಾಷ್ಟ್ರೀಯ ಮಟ್ಟದ ಪೋಲಿಸ್ ಸ್ಮರಣೋತ್ಸವ ದಿನದ ಮೆರವಣಿಗೆ ನಡೆಯುತ್ತದೆ, ಇದನ್ನು 2012 ರಿಂದ ಆರಂಭಿಸಲಾಗಿದೆ. * ಪ್ರಧಾನಿ ಮೋದಿ ಅವರು 2018 ರ ಅಕ್ಟೋಬರ್. 15 ರಂದು ದೆಹಲಿಯಲ್ಲಿ ರಾಷ್ಟ್ರೀಯ ಪೊಲೀಸ್ ಮ್ಯೂಸಿಯಂ'ನ್ನು ಉದ್ಘಾಟಿಸಿದರು, ಈ ಮ್ಯೂಸಿಯಂ ಭಾರತದ ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ ಇತಿಹಾಸವನ್ನು ತಿಳಿಸುತ್ತದೆ.