Job Description: * ಶ್ರೀಲಂಕಾ ದೇಶವು ಭಾರತದಿಂದ ಹಾನಿಕಾರಕವಲ್ಲದ ನ್ಯಾನೋ ನೈಟ್ರೋಜನ್ ದ್ರವ ರಸಗೊಬ್ಬರವನ್ನು ಸ್ವೀಕರಿಸಿದೆ. * ಇದೀಗ ಭಾರತವು 3.1 ಮಿಲಿಯನ್ ಲೀಟರ್ ಉತ್ತಮವಾದ ಹಾನಿಕಾರಕವಲ್ಲದ ನ್ಯಾನೋ ನೈಟ್ರೋಜನ್ ದ್ರವ ಗೊಬ್ಬರವನ್ನು ರವಾನಿಸಿದೆ, ಹಾಗೂ ಇದು ಶ್ರೀಲಂಕಾ ದೇಶದಲ್ಲಿನ ಜೋಳ ಮತ್ತು ಭತ್ತದ ಕೃಷಿಯಲ್ಲಿಯ ರಸಗೊಬ್ಬರಕ್ಕೆ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. * ಇತ್ತೀಚಿಗೆ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ರಾಸಾಯನಿಕ ಗೊಬ್ಬರ ಆಮದು ಸ್ಥಗಿತಗೊಳಿಸಿದ್ದರು, ಇದೀಗ ಶ್ರೀಲಂಕಾ ದೇಶವು ನ್ಯಾನೋ ನೈಟ್ರೋಜನ್ ದ್ರವ ಗೊಬ್ಬರವನ್ನು ಆಮದು ಮಾಡಿಕೊಳ್ಳಲು ಆರಂಭಿಸಿದೆ. * ನ್ಯಾನೊ ನೈಟ್ರೋಜನ್ ದ್ರವ ಗೊಬ್ಬರವನ್ನು ಭಾರತೀಯ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ ಲಿಮಿಟೆಡ್ (IFFCO) ಅಭಿವೃದ್ಧಿಪಡಿಸಿದೆ, ಇದರಿಂದ ಅತಿಯಾದ ಯೂರಿಯಾ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. * ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಈ ನ್ಯಾನೊ ನೈಟ್ರೋಜನ್ ದ್ರವ ಗೊಬ್ಬರವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಹಾಗೂ ಇದನ್ನು ಗುಜರಾತ್ ರಾಜ್ಯದಲ್ಲಿನ ಕಲೋಲ್ನಲ್ಲಿರುವ IFFCO ಯ ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. * ನ್ಯಾನೋ ಯೂರಿಯಾ ಸಸ್ಯದ ನಿರ್ಣಾಯಕ ಬೆಳೆ ಬೆಳವಣಿಗೆಯ ಹಂತಗಳಲ್ಲಿ ಸಾರಜನಕದ ಅಗತ್ಯವನ್ನು ಪೂರೈಸಲಿದೆ, ಹಾಗೂ ಯೂರಿಯಾಕ್ಕಿಂತಲೂ ಹೆಚ್ಚಿನ ಗುಣಮಟ್ಟವನ್ನು ಹೊಂದಿದೆ.