Job Description: * ಪ್ರಸ್ತುತ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಟೋಕನೈಸೇಶನ್ ಸಿಸ್ಟಮ್ (Tokenization system) (NTS) ಅನ್ನು ಆರಂಭಿಸಿದೆ, ಇದು ಕಾರ್ಡ್ಗಳ ಟೋಕನೈಸೇಶನ್ಗೆ ಬೆಂಬಲವಾಗಿ ಕಾರ್ಡ್ ವಿವರಗಳನ್ನು ವ್ಯಾಪಾರಿಗಳೊಂದಿಗೆ ಸಂಗ್ರಹಿಸಲು ಪರ್ಯಾಯ ವ್ಯಸ್ಥೆಯನ್ನು ನೀಡಲಿದೆ. * ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಹಾಗೂ ಗ್ರಾಹಕರಿಗೆ ತಡೆರಹಿತ ಶಾಪಿಂಗ್ ಅನುಭವವನ್ನು ನೀಡಲು NTS ರುಪೇ ಕಾರ್ಡ್ಗಳ ಟೋಕನೈಸೇಶನ್'ನ್ನು ಬೆಂಬಲಿಸಲಾಗಿದೆ. * ಎಲ್ಲಾ ವ್ಯವಹಾರಗಳು TROF'ನ್ನು ಬಳಸಿಕೊಳ್ಳುವ ಮೂಲಕ ತಮ್ಮ ರುಪೇ ಗ್ರಾಹಕರ ಮೂಲವನ್ನು ಭವಿಷ್ಯದ ವಹಿವಾಟುಗಳಿಗಾಗಿ ತಮ್ಮ ರುಪೇ ಗ್ರಾಹಕರಿಂದ ಆರಂಭಿಸಬಹುದು ಎಂದು ತಿಲಿಸಿದೆ. * ಎಲ್ಲ ವ್ಯಾಪಾರಿಗಳು 2022 ರ ಜನೇವರಿ. 01 ರೊಳಗೆ ಟೋಕನೈಸೇಶನ್'ನ್ನು ಪೂರೈಸಬೇಕು ಎಂದು ತಿಳಿಸಲಾಗಿದೆ. * ರಾಷ್ಟ್ರೀಯ ಪಾವತಿಗಳ ನಿಗಮ (NPCI)ವು ಭಾರತೀಯ ರಿಸರ್ವ್ ಬ್ಯಾಂಕ್ನ ವಿಶೇಷ ವಿಭಾಗವಾಗಿದೆ, ಅಷ್ಟೇ ಅಲ್ಲದೇ ಇದು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಇದನ್ನು ಭಾರತದಲ್ಲಿನ ಚಿಲ್ಲರೆ ಪಾವತಿ ಮತ್ತು ವಸಾಹತು ವ್ಯವಸ್ಥೆಯನ್ನು ನಿರ್ವಹಿಸಲು ಸ್ಥಾಪನೆ ಮಾಡಲಾಗಿದೆ. * 2008 ರ ಡಿಸೆಂಬರ್'ನಲ್ಲಿ NPCI'ನ್ನು ಸ್ಥಾಪಿಸಲಾಗಿದೆ.