Job Description: * ಮುಖ್ಯ ಅರ್ಥಶಾಸ್ತ್ರಜ್ಞೆ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯ (IMF) ಸಂಶೋಧನಾ ವಿಭಾಗದ ನಿರ್ದೇಶಕಿಯಾಗಿರುವ ಗೀತಾ ಗೋಪಿನಾಥ್ ಅವರು 2022 ರ ಜನೇವರಿಯಲ್ಲಿ ತಮ್ಮ ಕೆಲಸವನ್ನು ತೊರೆಯಲಿದ್ದಾರೆ, ನಂತರ ಇವರು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ. * ಗೀತಾ ಗೋಪಿನಾಥ್ ಅವರು 2019 ರ ಜನೇವರಿಯಲ್ಲಿ IMFಗೆ ಭಾರತೀಯ-ಅಮೇರಿಕನ್ ಅರ್ಥಶಾಸ್ತ್ರಜ್ಞರಾಗಿ ಸೇರ್ಪಡೆಯಾಗಿದ್ದರು. * ಗೀತಾ ಗೋಪಿನಾಥ್ ಅವರು IMF'ನ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿದ್ದಾರೆ. * ಗೀತಾ ಗೋಪಿನಾಥ್ ಅವರು 1971 ರಲ್ಲಿ ಜನಿಸಿ, ತಮ್ಮ ಶಾಲಾ ಶಿಕ್ಷಣವನ್ನು ಕೋಲ್ಕತ್ತಾದಲ್ಲಿ ಮುಗಿಸಿ, ನಂತರ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಪದವಿ ಮುಗಿಸಿದರು, ಇದಾದ ನಂತರ 2001 ರಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ phD ಪೂರ್ಣಗೊಳಿಸಿದಳು. * ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ನಂತರ ಹಾರ್ವರ್ಡ್ನಲ್ಲಿ ಈ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಗೀತಾ ಗೋಪಿನಾಥ್ ಅವರಾಗಿದ್ದಾರೆ.