Job Description: * 2021 ರ ಅಕ್ಟೋಬರ್. 19 ರಂದು ನಡೆದ ಮಧ್ಯಪ್ರದೇಶದ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯ ಮಂತ್ರಿ ಪಡಿತರ ಆಪ್ಕೆ ದ್ವಾರ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. * ಮಧ್ಯಪ್ರದೇಶದ ರಾಜ್ಯದಲ್ಲಿನ ಬಡ ಬುಡಕಟ್ಟು ಕುಟುಂಬಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮುಖ್ಯ ಮಂತ್ರಿ ಪಡಿತರ ಆಪ್ಕೆ ದ್ವಾರ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕ್ಯಾಬಿನೆಟ್ ತಿಳಿಸಿದೆ. * ಈ ಯೋಜನೆಯು ಉಪಯೋಗವನ್ನು ಮಧ್ಯಪ್ರದೇಶದ 16 ಜಿಲ್ಲೆಗಳ 74 ಅಭಿವೃದ್ಧಿ ಬ್ಲಾಕ್ಗಳಲ್ಲಿನ ಸರಿ ಸುಮಾರು 7511 ಹಳ್ಳಿಗಳ ಬುಡಕಟ್ಟು ಕುಟುಂಬಗಳು ಪಡೆಯಲಿವೆ. * ಪ್ರಸ್ತುತ 220 ರಿಂದ 440 ಕ್ವಿಂಟಾಲ್ ಪಡಿತರವನ್ನು 22 ರಿಂದ 25 ದಿನಗಳವರೆಗೆ ವಾಹನದ ಮೂಲಕ ಪ್ರಜೆಗಳ ಮನೆಗಳಿಗೆ ರವಾನಿಸಲಾಗುತ್ತದೆ, ಈ ಯೋಜನೆಗಾಗಿಯೇ ಸುಮಾರು 472 ವಾಹನಗಳನ್ನು ಬಳಸಲಾಗುತ್ತದೆ.