Job Description: * ಕೇಂದ್ರ ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರ ಶಿಫಾರಸಿನ ಮೇರೆಗೆ ಇದೀಗ ಭಾರತೀಯ ರೈಲ್ವೇ ನಿಲ್ದಾಣಗಳ ಅಭಿವೃದ್ಧಿ ನಿಗಮವನ್ನು ವಿಸರ್ಜಿಸಲು ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ. * ರೈಲ್ವೇ ಬೋರ್ಡ್ IRSDCಯನ್ನು ಮುಚ್ಚಲು ಅಗತ್ಯವಿರುವ ಎಲ್ಲ ಕಾರ್ಯವಿಧಾನಗಳನ್ನು ಆರಂಭಿಸಲು ಆದೇಶ ನೀಡಿದೆ, ಅಷ್ಟೇ ಅಲ್ಲದೇ IRSDC ನಿರ್ವಹಿಸುತ್ತಿರುವ ಕೇಂದ್ರಗಳು ಮತ್ತು ಎಲ್ಲಾ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆಯಾ ರೈಲ್ವೆ ವಲಯಗಳಿಗೆ ನೀಡಲಾಗುತ್ತದೆ. * ಇದೀಗ ರೈಲ್ವೇ ಸಚಿವಾಲಯದ ಅಡಿಯಲ್ಲಿ ಸ್ಥಗಿತಗೊಳ್ಳುವ 2ನೇ ಸಂಸ್ಥೆ ಇದಾಗಿದೆ, ಇದ್ದಕು ಮುಂಚೆ 2021 ರ ಸೆಪ್ಟೆಂಬರ್. 7ರಂದು ಭಾರತೀಯ ರೈಲ್ವೇ ಪರ್ಯಾಯ ಇಂಧನಕ್ಕಾಗಿ ಭಾರತೀಯ ರೈಲ್ವೇ ಸಂಘಟನೆ (IROAF)ಯನ್ನು ಸ್ಥಗಿತಗೊಳಿಸಲಾಗಿತ್ತು. *IRSDC ಇದೊಂದು ವಿಶೇಷ ಉದ್ದೇಶದ ವಾಹನವಾಗಿದೆ, ಅಷ್ಟೇ ಅಲ್ಲದೇ ಇದು ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ RITES ಮತ್ತು IRCON ನ ಜಂಟಿ ಉದ್ಯಮವಾಗಿದೆ, ಈ ಎಲ್ಲ ಭಾರತೀಯ ರೈಲ್ವೆಯ 3 ಕಂಪನಿಗಳು ಭಾರತೀಯ ರೈಲ್ವೇ ಸಚಿವಾಲಯದ ಅಧೀನದಲ್ಲಿವೆ.