Job Description: * ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆಯು ಹೊಸ 'ನಿರ್ಧಾರ ಬೆಂಬಲ ವ್ಯವಸ್ಥೆ' ಮತ್ತು 'ವಾಯು ಗುಣಮಟ್ಟದ ಮುಂಚಿನ ಎಚ್ಚರಿಕೆ ವ್ಯವಸ್ಥೆ' ಅಭಿವೃದ್ಧಿಪಡಿಸಿದೆ. * ಪ್ರಸ್ತುತ ಕೇಂದ್ರ ರಾಜ್ಯ ಸಚಿವ ವಿಜ್ಞಾನ ಮತ್ತು ತಂತ್ರಜ್ಞಾನ, ಡಾ. ಜಿತೇಂದ್ರ ಸಿಂಗ್ ಅವರು ಈ ವ್ಯವಸ್ಥೆಗಳನ್ನು ಪ್ರಾರಂಭಿಸಿದ್ದಾರೆ. * ಈ ವ್ಯವಸ್ಥೆಗಳನ್ನು ದೆಹಲಿ ಪ್ರದೇಶದಲ್ಲಿ ಉತ್ತಮ ವಾಯು-ಗುಣಮಟ್ಟದ ನಿರ್ವಹಣೆಗಾಗಿ ಆರಂಭಿಸಲಾಗಿದೆ. * ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆಯು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಇದೀಗ ಈ ಸಂಸ್ಥೆಯು ಪುಣೆ ನಗರದಲ್ಲಿದೆ. * ಪುಣೆಯಲ್ಲಿನ ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆಯು ಈ ವಾಯು ಗುಣಮಟ್ಟದ ಮುಂಚಿನ ಎಚ್ಚರಿಕೆ ವ್ಯವಸ್ಥೆ (AQEWS)ಯನ್ನು ಅಭಿವೃದ್ಧಿಪಡಿಸಿದೆ, ಈ ವ್ಯವಸ್ಥೆಯು ಮುಂದಿನ 72 ಗಂಟೆಗಳ ಕಾಲ ವಾಯು ಮಾಲಿನ್ಯದ ಮಟ್ಟವನ್ನು ಅಂದಾಜಿಸಲು ಡೇಟಾವನ್ನು ಗಾಳಿಯ ವೇಗದೊಂದಿಗೆ ಸಂಯೋಜಿಸುತ್ತದೆ, ಹಾಗೂ ಎಚ್ಚರಿಕೆ ಸಂದೇಶಗಳು ಮತ್ತು ಬುಲೆಟಿನ್ಗಳನ್ನು ಒದಗಿಸುತ್ತದೆ.