Job Description: * ಪ್ರಸ್ತುತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (NASA) ನಾಸಾಯು ಸೌರ ಮಂಡಲದ ಅಧ್ಯಯನ ಮತ್ತು ಗುರುಗ್ರಹದ ಟ್ರೋಜನ್ ಕ್ಷುದ್ರಗ್ರಹಗಳ ಅಧ್ಯಯನಕ್ಕಾಗಿ ಲೂಸಿ ಎಂಬ ನೌಕೆಯನ್ನು ರವಾನಿಸಿದೆ, ಅಷ್ಟೇ ಅಲ್ಲದೆ ಈ ಲೂಸಿ ನೌಕೆಯು ಸೌರಮಂಡಲದಲ್ಲಿ 12 ವರ್ಷಗಳ ಕಾಲ ತನ್ನ ಕಾರ್ಯಾವನ್ನು ನಿರ್ವಹಿಸಲಿದೆ. * ನಾಸಾದ ಅಟ್ಲಾಸ್ 5 ರಾಕೆಟ್ ಫ್ಲಾರಿಡಾದ ಕೇಪ್ ಕ್ಯಾನವೆರಲ್ ಉಡಾವಣಾ ನೆಲೆಯಿಂದ ಈ ಲೂಸಿ ನೌಕೆಯನ್ನು ಉಡಾವಣೆ ಮಾಡಲಾಗಿದೆ, ಈ ಲೂಸಿ ನೌಕೆಯು ಸೌರಶಕ್ತಿಚಾಲಿತ ನೌಕೆಯಾಗಿದೆ, ಇದು 8 ಕ್ಷುದ್ರಗ್ರಹಗಳ ಬಗ್ಗೆ ಅಧ್ಯಯನವನ್ನು ನಡೆಸಲಿದೆ. * ಪ್ರಸ್ತುತ 2025ರಲ್ಲಿ ಮೊದಲ ಬಾರಿಗೆ ಮಂಗಳ ಹಾಗೂ ಗುರುವಿನ ನಡುವಿನ ವಲಯದಲ್ಲಿರುವ ಡೊನಾಲ್ಡ್ ಜೋಹಾನ್ಸನ್ ಎಂಬ ಟ್ರೋಜನ್ ಕ್ಷುದ್ರಗ್ರಹವನ್ನು ಈ ಲೂಸಿ ನೌಕೆಯು ಭೇಟಿಯಾಗಲಿದೆ., ಹಾಗೂ 2027ರಿಂದ 2033ರವರೆಗೆ ಲೂಸಿ ಒಟ್ಟಾರೆ 7 ಟ್ರೋಜನ್ ಕ್ಷುದ್ರಗ್ರಗಳ ಬಗ್ಗೆ ಅನ್ವೇಷಣೆ ನಡೆಸಲಿದೆ ಎಂದು ತಿಳಿಸಿದ್ದಾರೆ. * ಸರಿ ಸುಮಾರು 7000 ಟ್ರೋಜನ್ ಕ್ರುದ್ರಗ್ರಹಗಳು ಗುರು ಗ್ರಹಕ್ಕೆ ಹೊಂದಿಕೊಂಡಿವೇ ಎನ್ನಲಾಗಿದೆ.