Job Description: * ಪ್ರಸ್ತುತ ಚೀನಾದ ಗನ್ಸು ಪ್ರಾಂತ್ಯದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಬ್ಬರು ಪುರುಷ ಮತ್ತು ಓರ್ವ ಮಹಿಳೆಯನ್ನು ಒಳಗೊಂಡ ಅಂತರಿಕ್ಷ ಯಾನಿಗಳ ತಂಡವನ್ನು ಬಾಹ್ಯಾಕಾಶಕ್ಕೆ ಕಳುಹಿಸುವ 6 ತಿಂಗಳ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಚೀನಾ ಚಾಲನೆ ನೀಡಿದೆ ಎನ್ನಲಾಗಿದೆ. * ಚೀನಾ ದೇಶವು ಅಂತರಿಕ್ಷದಲ್ಲಿ ನಿರ್ಮಾಣಮಾಡುತ್ತಿರುವ ತಿಯಾನೆ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಕಾರ್ಯಕ್ಕೆ ಈ ಅಂತರಿಕ್ಷ ಯಾನಿಗಳು ನೆರವಾಗಲಿದ್ದಾರೆ. * ಪ್ರಸ್ತುತ ಈ ಕಾರ್ಯಕ್ಕೆ ಮಾರ್ಚ್-2ಎಫ್ ರಾಕೆಟ್ ಮೂಲಕ ಶೆನ್ಝೋ -13 ಎಂಬ ಹೆಸರಿನ ಅಂತರಿಕ್ಷ ನೌಕೆಯನ್ನು ಅಂತರಿಕ್ಷಕ್ಕೆ ಉಡಾಯಿಸಲಾಗಿದೆ ಎಂದು ತಿಳಿಸಿದ್ದಾರೆ. * ಚೀನಾ ನಿರ್ಮಾಣ ಮಾಡುತ್ತಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ತಂಡವು 6 ತಿಂಗಳು ವಾಸ್ತವ್ಯವನ್ನು ಹೂಡಲಿದೆ, ಹಾಗೂ ನಿರ್ಮಾಣ ಕಾರ್ಯವನ್ನು ನಿರ್ವಹಿಸಲಿದೆ. * ಇದೇ 2021ರ ಏಪ್ರಿಲ್'ನಿಂದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ, ಇದು 2022ರ ಡಿಸೆಂಬರ್'ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.