Job Description: * ವಿಶ್ವ ಆರೋಗ್ಯ ಸಂಸ್ಥೆ (WHO)ಯು ಬಡ ಮತ್ತು ಕಡಿಮೆ ಆದಾಯದ ರಾಷ್ಟ್ರಗಳಲ್ಲಿ ಲಸಿಕೆ ಸಮಾನತೆಯನ್ನ ಖಚಿತಪಡಿಸಿಕೊಳ್ಳಲು ದೇಶಗಳಿಗೆ ಸೂಚಿಸುತ್ತಿದೆ, ಇದರ ನಡುವೆ ಇದೀಗ ವಿಶ್ವದ ಮೊದಲ ಮಾತ್ರೆ 'Molnupiravir' ಕೊರೊನಾ ಸೋಂಕಿನ ಚಿಕಿತ್ಸೆಗೆ ಸಿದ್ಧವಾಗಿದೆ, ಈ ಔಷಧವು ಕೋವಿಡ್-19 ವಿರುದ್ಧದ ಹೋರಾಡಲು ಸಹಾಯ ಮಾಡುತ್ತದೆ. * ಪ್ರಸ್ತುತ ಔಷಧೀಯ ದೈತ್ಯ ಮೆರ್ಕ್ ಈ ಹೊಸ ಔಷಧೀಯ ತುರ್ತು ಬಳಕೆಯ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದೆ, ಅಷ್ಟೇ ಅಲ್ಲದೇ ಈ ಹೊಸ ಔಷಧವು ಸಾವಿನ ಪ್ರಮಾಣವನ್ನು ಶೇ. 50ರಷ್ಟು ಕಡಿಮೆ ಮಾಡಲಿದೆ ಎಂದು ತಿಳಿದು ಬಂದಿದೆ. * ಕೊರೊನಾ ಸೋಂಕಿನ ಚಿಕಿತ್ಸೆಗೆ ಸಿದ್ಧವಾಗಿರುವ ಈ ಔಷಧಕ್ಕೆ ಮೊಲ್ನುಪಿರಾವಿರ್(Molnupiravir) ಎನ್ನಲಾಗಿದೆ, ಈ ಮಾತ್ರೆಯನ್ನು ಜನರಿಗೆ ಸೋಂಕಿನ ಆರಂಭದಲ್ಲಿ ನೀಡುವದರಿಂದ ಆಸ್ಪತ್ರೆಗೆ ದಾಖಲಾಗುವ ಅಥವಾ ಸಾವಿನ ಅಪಾಯವನ್ನ ಕಡಿಮೆ ಮಾಡಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಕೊರೊನಾ ವೈರಸ್ ವಿರುದ್ಧ ಅಪಾರ ಸಂಖ್ಯೆಯ ಲಸಿಕೆಗಳ ನಡುವೆ ಅನುಮೋದನೆ ಪಡೆದಕೊಳ್ಳುವ ಮೊದಲ ಮಾತ್ರೆ ಇದಾಗಲಿದೆ ಎಂದಿದ್ದಾರೆ. * ಮೆರ್ಕ್ ಫಾರ್ಮಾ ಈ ವರ್ಷದ ಆರಂಭದಲ್ಲಿ ಯುಎಸ್ ಸರ್ಕಾರದೊಂದಿಗೆ ಈ ಮಾತ್ರೆಯ ಖರೀದಿಗೆ ಒಪ್ಪಂದವನ್ನ ಮಾಡಿಕೊಂಡಿತ್ತು, ಇದರ ಅನುಸಾರವಾಗಿ ಅನುಮೋದನೆಯ ನಂತರ ಸರಿ ಸುಮಾರು 1.7 ಮಿಲಿಯನ್ ಕೋರ್ಸ್ʼಗಳನ್ನು ಮೊಲ್ನುಪಿರಾವೀರ್(Molnupiravir) ಪೂರೈಸಲಿದೆ ಎಂದು ತಿಳಿದು ಬಂದಿದೆ.