Job Description: * ಪ್ರಸ್ತುತ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಇದೀಗ ಸೋಲಾರ್ ಉಪಕರಣ ತಯಾರಕ ಎರಡು ಪ್ರಮುಖ ವಿದೇಶಿ ಸಂಸ್ಥೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. * ಪ್ರಸ್ತುತ ನಾರ್ವೆ ಮೂಲದ ಆರ್ ಇ ಸಿ ಸಂಸ್ಥೆಯನ್ನು ರಿಲಯನ್ಸ್ 5.8 ಸಾವಿರ ಕೋಟಿ ರೂ.ಗೆ ಖರೀದಿ ಮಾಡಿದೆ, ಹಾಗೂ ಸ್ಟೆರ್ಲಿಂಗ್ ಅಂಡ್ ವಿಲ್ಸನ್'ನ್ನು ರಿಲಯನ್ಸ್ 2.8 ಸಾವಿರ ಕೋಟಿ ರೂ.ಗೆ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. * ಈ ನಾರ್ವೆ ಮೂಲದ ಆರ್ ಇ ಸಿ ಸಂಸ್ಥೆ ಪೇಟೆಂಟ್ ತಂತ್ರಜ್ನಾನವನ್ನು ಹೊಂದಿದೆ, ಇದರಿಂದ ರಿಲಯನ್ಸ್ ಸಂಸ್ಥೆಯು ಸೋಲಾರ್ ಉದ್ಯಮ ರಫ್ತು ಮಾರುಕಟ್ತೆಗೆ ಕಾಲಿಡಲು ಸಹಾಯವಾಗಲಿದೆ ಎಂದು ತಿಳಿದುಬಂದಿದೆ. * ಈ ಮೊದಲು ಯುರೋಪ್ ಮತ್ತು ಅಮೆರಿಕ ದೇಶಗಳಿಗೆ ನಾರ್ವೆ ಮೂಲದ ಈ ಆರ್ ಇ ಸಿ ಸಂಸ್ಥೆ ಸೋಲಾರ್ ತಂತ್ರಜ್ನಾನ ರಫ್ತು ಮಾಡಲಾಗುತಿತ್ತು.