Job Description: * ಪ್ರಸ್ತುತ ಚೀನಾ ಹಾಗೂ ಉತ್ತರ ಕೊರಿಯಾ ದೇಶಗಳ ಸವಾಲುಗಳನ್ನು ಎದುರಿಸಲು ಅಮೇರಿಕಾ ಅಧ್ಯಕ ಜೋ ಬಿಡೆನ್, ಜಪಾನ್ ದೇಶದೊಂದಿಗಿನ ಮೈತ್ರಿಯನ್ನು ಬಲಪಡಿಸಲು, ಹಾಗೂ ರಕ್ಷಣೆಯ ಭರವಸೆಯನ್ನು ಈಡೇರಿಸುವದಾಗಿ ತಿಳಿಸಿದ್ದಾರೆ ಎಂದು ಜಪಾನ್ನ ನೂತನ ಪ್ರಧಾನಿ ಫ್ಯೂಮಿಯೊ ಕಿಶಿದಾ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಜಪಾನ್ ದೇಶದ ನಿಯಂತ್ರಣದಲ್ಲಿರುವ ಪೂರ್ವ ಚೀನಾ ಸಮುದ್ರ ದ್ವೀಪವಾಗಿರುವ ಸೆಂಕಾಕುವನ್ನು ರಕ್ಷಿಸಲು ಅಮೇರಿಕಾ ದೇಶವು ಸಿದ್ಧವಾಗಿದೆ ಜೋ ಬೈಡನ್ ಭರವಸೆ ನೀಡಿದ್ದಾರೆ. * ಇದೀಗ ಅಮೇರಿಕಾ ದೇಶವು ಸೆಕಾಂಕು ದ್ವೀಪ ಹಾಗೂ ಜಪಾನ್ ರಕ್ಷಣೆಗೆ ಸಿದ್ಧವಾಗಿದೆ ಎಂದು ಬೈಡನ್ ತಿಳಿಸಿದ್ದಾರೆ. * ಚೀನಾ ಹಾಗೂ ಉತ್ತರ ಕೊರಿಯಾ ರಾಷ್ಟ್ರಗಳು ನೀಡುತ್ತಿರುವ ಸವಾಲುಗಳನ್ನು ಅಮೇರಿಕಾ ಮತ್ತು ಜಪಾನ್ ದೇಶಗಳು ಜಂಟಿಯಾಗಿ ನಿಭಾಯಿಸುವುದಾಗಿ ತಿಳಿಸಿವೆ.