Job Description: * ಪ್ರಸ್ತುತ 2021 ನೇ ಸಾಲಿನ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಯ 3 ವಿಜ್ಞಾನಿಗಳಾದ ಸುಕುರೊ ಮನಬೆ, ಕ್ಲಾಸ್ ಹ್ಯಾಸಲ್ಮನ್, ಮತ್ತು ಜಾರ್ಜಿಯೊ ಪಾರಿಸಿ ಎನ್ನುವವರಿಗೆ ಜಂಟಿಯಾಗಿ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. * ಈ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ವಿಶ್ವದ ಭೌತಿಕ ರಚನೆಯ ವಿಶ್ಲೇಷಣೆ ಮತ್ತು ಹವಾಮಾನ ಬದಲಾವಣೆಗಳ ಬಗೆಗೆ ಕೈಗೊಂಡ ಸಂಶೋಧನೆಯನ್ನು ಗಮನದಲ್ಲಿಟ್ಟು ಈ ಪ್ರಶಸ್ತಿಯನ್ನು ಜಂಟಿಯಾಗಿ ವಿಜ್ಞಾನಿಗಳಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಈ ಪ್ರಶಸ್ತಿಯ ಬಹುಮಾನದ ಮೊತ್ತ 8.56 ಕೋಟಿ ರೂ. * ಪ್ರಸ್ತುತ ಸುಕುರೊ ಮನಬೆ ಅವರು ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟದಲ್ಲಿನ ಏರಿಕೆಗೆ ತಕ್ಕಂತೆ, ಭೂಮಿಯ ಮೇಲ್ಮೈಯ ಉಷ್ಣಾಂಶದಲ್ಲಿ ಯಾವ ರೀತಿಯಲ್ಲಿ ಏರಿಕೆಯಾಗುತ್ತದೆ ಎನ್ನಬುವದನ್ನು ವಿವರಿಸಿದ್ದಾರೆ. * ಕ್ಲಾಸ್ ಹ್ಯಾಸಲ್ಮನ್ ಅವರು ವಾತಾವರಣದಲ್ಲಿ ಸಾಕಷ್ಟು ಏರಿಳಿತಗಳು ಕಂಡರೂ, ಹವಾಮಾನ ಮಾದರಿಗಳು ವಿಶ್ವಾಸಾರ್ಹವಾಗಿವೆ ಎಂಬುವವದನ್ನು ತಿಳಿಸಿದ್ದಾರೆ. * ಜಾರ್ಜಿಯೊ ಪಾರಿಸಿ ಅವರು ಗಣಿತ, ಜೀವವಿಜ್ಞಾನ ಮತ್ತು ಮಷಿನ್ ಲರ್ನಿಂಗ್ ನ ಸೂತ್ರಗಳನ್ನು ಬಳಕೆಮಾಡಿಕೊಂಡು ವಸ್ತುಗಳ ಸಂಕೀರ್ಣ ಸಂರಚನೆಯನ್ನು ವಿವರಿಸಿದ್ದಾರೆ, ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಮಾಹಿತಿ ನೀಡಿದೆ.