Job Description: * ಪ್ರಸ್ತುತ ಭೌಗೋಳಿಕ ಸೂಚಿ(GI ಟ್ಯಾಗ್)ಯ ಮಾನ್ಯತೆಯನ್ನು ಪಡೆದ 'ಕೋಲಂ ಅಕ್ಕಿ', ಈ ಅಕ್ಕಿಯನ್ನು ಮಹಾರಾಷ್ಟ್ರ ರಾಜ್ಯದ ಪಾಲ್ಘರ್ ಜಿಲ್ಲೆಯ ವಾಡಾ ಪ್ರದೇಶದಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಾರೆ. * ಇದೀಗ ಈ ಅಕ್ಕಿಯು 'ವಾಡಾ ಕೋಲಂ ಅಕ್ಕಿ' ಎಂದೇ ಪ್ರಖ್ಯಾತಿ ಪಡೆದಿದೆ, ಹಾಗೂ ಈ ಅಕ್ಕಿಯನ್ನು 'ಝಿನಿ' ಅಥವಾ 'ಜ್ಹಿನಿ ಅಕ್ಕಿ' ಎಂದು ಕರೆಯುತ್ತಾರೆ, ಎಂದು ಅಲ್ಲಿನ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಂಕುಶ್ ಮಾನೆ ಅವರು ಮಾಹಿತಿ ನೀಡಿದ್ದಾರೆ. * ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ಈ ಅಕ್ಕಿಯ ತಳಿಗೆ ಪ್ರತಿ ಒಂದು ಕೆ.ಜಿ ದರ 60-70 ರೂ. ವಿದೆ, ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ. * ಮಹಾರಾಷ್ಟ್ರದ ರಾಜ್ಯದ ಪಾಲ್ಘರ್ ಜಿಲ್ಲೆಯ ವಾಡಾ ತಾಲ್ಲೂಕಿನ ಸುಮಾರು 180 ಗ್ರಾಮಗಳ 2,500 ರೈತರು ಈ ಅಕ್ಕಿಯನ್ನು ಬೆಳೆಯುವ ಕೃಷಿಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.