Job Description: * ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡವು ಇತ್ತೀಚಿಗೆ ನಡೆದ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸಿದೆ. * ಭಾರತ ತಂಡವು ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋಲ ಅನುಭವಿಸಿ ಕಂಚಿನ ಪದಕ ಪಡೆದಿದೆ. * ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಟೇಬಲ್ ಟೆನಿಸ್ ಫೆಡರೇಶನ್ ಆಫ್ ಏಷ್ಯಾ (TTFA) 1952 ರಿಂದ 1972 ರವರೆಗೆ ಆಯೋಜಿಸಿತ್ತು. * ರಾಷ್ಟ್ರೀಯ ಟೇಬಲ್ ಟೆನ್ನಿಸ್ ಅಸೋಸಿಯೇಶನ್ಗಳ ನಡುವಿನ ಸಂಘರ್ಷದಿಂದಾಗಿ, ಏಷಿಯಾ ಟೇಬಲ್ ಟೆನಿಸ್ ಯೂನಿಯನ್ ಏಷ್ಯಾದಲ್ಲಿ ತನ್ನದೇ ಏಷ್ಯನ್ ಚಾಂಪಿಯನ್ಶಿಪ್ ಪಂದ್ಯಗಳನ್ನು ಪ್ರಾರಂಭಿಸಿತು. * ಅಂತರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ ಇದೊಂದು ರಾಷ್ಟ್ರೀಯ ಟೇಬಲ್ ಟೆನ್ನಿಸ್ ಸಂಘಗಳ ಆಡಳಿತ ಮಂಡಳಿಯಾಗಿದೆ. * ಈ ಹಿಂದೆ 1926 ರಿಂದ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ಗಳ ಪಂದ್ಯಾವಳಿಗಳನ್ನೂ ನಡೆಸಲಾಗುತ್ತಿದೆ, ಮತ್ತೆ ಇದನ್ನು 1957 ರಿಂದ, ಇದನ್ನು ದ್ವೈವಾರ್ಷಿಕವಾಗಿ ನಡೆಸಲಾಗುತ್ತಿದೆ.