Job Description: * 2021 ರ ಸೆಪ್ಟೆಂಬರ್. 27 ರಿಂದ ಅಕ್ಟೋಬರ್. 01 ರವರೆಗೆ ನವದೆಹಲಿಯಲ್ಲಿ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಕೈಗಾರಿಕಾ ಭದ್ರತಾ ಒಪ್ಪಂದದ ಶೃಂಗಸಭೆಯನ್ನು ನಡೆಸಲಾಯಿತು. * ಪ್ರಸ್ತುತ ಉಭಯ ದೇಶಗಳ ರಕ್ಷಣಾ ಉದ್ಯಮಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ, ಈ ಸಭೆಯನ್ನು ಭದ್ರತಾ ಪ್ರಾಧಿಕಾರಗಳು ವಹಿಸಿಕೊಂಡಿದ್ದವು. * ಕೈಗಾರಿಕಾ ಭದ್ರತಾ ಒಪ್ಪಂದ (ISA): ಭಾರತ-ಅಮೆರಿಕದ ಭಾಗವಾಗಿದೆ. ಮಿಲಿಟರಿ ಮಾಹಿತಿ ಒಪ್ಪಂದದ ಸಾಮಾನ್ಯ ಭದ್ರತೆ (GSOMIA)ಯಾಗಿದೆ. 2019 ರ ಡಿಸೆಂಬರ್ ನಲ್ಲಿ ಅಮೆರಿಕಾದ ವಾಷಿಂಗ್ಟನ್ನಲ್ಲಿ ಜರುಗಿದ ಎರಡನೇ 2+2 ಸಂವಾದದಲ್ಲಿ ಇದಕ್ಕೆ ಒಪ್ಪಿಗೆ ನೀಡಿ ಸಹಿ ಹಾಕಲಾಯಿತು. * ಈ ಹಿಂದೆ 2002 ರಲ್ಲಿ ಭಾರತ ಮತ್ತು ಯುಎಸ್ ನಡುವೆ GSOMIA ಗೆ ಸಹಿ ಹಾಕಲಾಯಿತು, ಈ ಒಪ್ಪಂದವು ಗುಪ್ತಚರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಮಿಲಿಟರಿಗಳಿಗೆ ಅವಕಾಶ ನೀಡುತ್ತದೆ.