Job Description: * ಅಂತರರಾಷ್ಟ್ರೀಯ ಭಾಷಾಂತರ(ಅನುವಾದ) ದಿನವನ್ನು ಸೆಪ್ಟೆಂಬರ್ 30 ರಂದು ಆಚರಣೆ ಮಾಡಲಾಯಿತು. * ಅಂತರಾಷ್ಟ್ರೀಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಗಣನೀಯ ಕೊಡುಗೆ ನೀಡಿರುವ ಹಿನ್ನಲೆಯಿಂದಾಗಿ ಭಾಷಾ ತಜ್ಞರ ಕೆಲಸವನ್ನು ಗೌರವಿಸಲಾಯಿತು. * ಸೇಂಟ್ ಜೆರೋಮ್ ಸಾವಿನ ದಿನವನ್ನು ಸೆಪ್ಟೆಂಬರ್. 30 ರಂದು ಆಚರಿಸಲಾಗುತ್ತದೆ, ಇವರು ಬೈಬಲ್ ಭಾಷಾಂತರಕಾರರಾಗಿದ್ದರು, ಹಾಗೂ ಇವರನ್ನು 'ಭಾಷಾಶಾಸ್ತ್ರಜ್ಞರ ಪೋಷಕ ಸಂತ' ಎಂದು ಪರಿಗಣಿಸಲಾಗಿದೆ. * ಈ ದಿನವನ್ನು 2021ರ 'ಅನುವಾದದಲ್ಲಿ ಯುನೈಟೆಡ್' ಎಂಬ ವಿಷಯದ ಅಡಿಯಲ್ಲಿ ಆಚರಣೆ ಮಾಡಲಾಯಿತು ಹಾಗೂ ಭಾಷಾ ತಜ್ಞರ ಕೆಲಸವನ್ನು ಗೌರವಿಸಲು ಆಚರಣೆ ಮಾಡಲಾಗುತ್ತದೆ. * ಈ ಅಂತರಾಷ್ಟ್ರೀಯ ಅನುವಾದ ದಿನವನ್ನು 1953 ರಲ್ಲಿ ಆಚರಣೆ ಮಾಡಲು ಆರಂಭಿಸಲಾಯಿತು. ಆ ದಿನದಿಂದ ಈ ದಿನವನ್ನು 'ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಟ್ರಾನ್ಸ್ಲೇಟರ್ಸ್' ಆಯೋಜಿಸುತ್ತಿದೆ.