Job Description: * ಪ್ರಸ್ತುತ ಭಾರತದ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಗೆ ಆಸ್ಟ್ರೇಲಿಯಾದ ಉನ್ನತ ವೈದ್ಯಕೀಯ ನಿಯಂತ್ರಕ ಮಂಡಳಿಯು ಅನುಮೋದನೆ ನೀಡಿದೆ. * ಈ ಅನುಮೋದನೆಯಿಂದಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾ ದೇಶಕ್ಕೆ ಪ್ರಯಾಣ ಬೆಳೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. * ಚಿಕಿತ್ಸಾ ಸರಕುಗಳ ಆಡಳಿತವು ಕೊರೊನಾವ್ಯಾಕ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು 'ಮಾನ್ಯತೆ ಪಡೆದ ಲಸಿಕೆಗಳು' ಎಂದು ಪರಿಗಣಿಸಿದೆ, ಅಂತರರಾಷ್ಟ್ರೀಯ ಪ್ರಯಾಣಿಕರು ಈ ಲಸಿಕೆಗಳನ್ನೂ ಪಡೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರ ಕಚೇರಿಯು ಮಾಹಿತಿ ನೀಡಿದೆ. * ಚಿಕಿತ್ಸಾ ಸರಕುಗಳ ಆಡಳಿತವು(TGA) ಎಂಬುವದು ಆಸ್ಟ್ರೇಲಿಯಾದ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ನಿಯಂತ್ರಕವಾಗಿದೆ. * ಒಂದು ವೇಳೆ ಚಿಕಿತ್ಸಾ ಸರಕುಗಳ ಆಡಳಿತದಿಂದ ಮಾನ್ಯತೆ ಪಡೆಯದ ಲಸಿಕೆಗಳನ್ನು ಹಾಕಿಸಿಕೊಂಡಿರುವ, ಅಥವಾ ಲಸಿಕೆಯನ್ನೇ ಹಾಕಿಸಿಕೊಳ್ಳದ ಜನರು ಆಸ್ಟ್ರೇಲಿಯಾಕ್ಕೆ ಬಂದ ನಂತರ ಸುಮಾರು 14 ದಿನಗಳ ಕ್ವಾರಂಟೈನ್ನಲ್ಲಿರಬೇಕು ಎಂದು ತಿಳಿಸಿದೆ.