Job Description: * ಪ್ರಸ್ತುತ 2020-21 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರವು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮ ಪಂಚಾಯಿತಿಗೆ ಲಭಿಸಿದೆ. * ಈ ಹಿಂದೆ ಗೊಜನೂರ ಗ್ರಾಮ ಪಂಚಾಯಿತಿ 2013-14 ನೇ ಸಾಲಿನಲ್ಲೂಯು ಕೂಡ ಈ ಪುರಸ್ಕಾರವನ್ನು ಪಡೆದುಕೊಂಡಿತ್ತು. * ಪ್ರಸ್ತುತ ಈ ಗೊಜನೂರ ಗ್ರಾಮ ಪಂಚಾಯಿತಿಯು ಗೊಜನೂರ, ಅಕ್ಕಿಗುಂದ, ಹಾಗೂ ಅಕ್ಕಿಗುಂದ ತಾಂಡಾ 3 ಗ್ರಾಮಗಳನ್ನು ಒಳಗೊಂಡಿದೆ, ಈ ಗ್ರಾಮ ಪಂಚಾಯಿತಿಯು ಒಟ್ಟಾರೆ 5508 ಜನಸಂಖ್ಯೆಯನ್ನು ಹೊಂದಿದೆ. * ಈ ಗ್ರಾಮ ಪಂಚಾಯತಿಯು 2020-21 ರಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆಯಡಿಲ್ಲಿನ ಕ್ರಿಯಾ ಯೋಜನೆ ರಚಿಸಿತ್ತು ಅದರಂತೆಯೇ ಇ-ಗ್ರಾಮವು ಎಲ್ಲ ಕ್ರಿಯಾ ಯೋಜನೆಗಳನ್ನು ಶೇ.100 ರಷ್ಟು ಅನುಷ್ಠಾನಗೊಳಿಸಿತ್ತು. * ಈ ಗ್ರಾಮ ಪಂಚಾಯತಿಯು ವ್ಯಾಪ್ತಿಯ 5 ಸರ್ಕಾರಿ ಶಾಲೆ, 1 ಮೊರಾರ್ಜಿ ವಸತಿ ಶಾಲೆಯ ಅಭಿವೃದ್ಧಿ ಕಾರ್ಯವನ್ನು ಹಮ್ಮಿಕೊಂಡಿತ್ತು, ಹಾಗೂ ವಸತಿ ಯೋಜನೆಯಡಿಲ್ಲಿ ಮಂಜೂರಾಗಿರುವ ಶೇ.80 ರಷ್ಟು ಮನೆಗಳನ್ನೂ ನಿರ್ಮಾಣ ಮಾಡಿದೆ, ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಗ್ರಾಮ ಪಂಚಾಯತಿಯು ವ್ಯಾಪ್ತಿಗೆ ಬರುವ ಗ್ರಾಮದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರಕೆ ಮಾಡುತ್ತಿದೆ, ಪಂಚಾಯತ್ರಾಜ್ ಇಲಾಖೆಯು ಈ ಎಲ್ಲ ಅಂಕಿ ಅಂಶಗಳನ್ನು ಪರಿಗಣಿಸಿ ಗೊಜನೂರ ಗ್ರಾಮ ಪಂಚಾಯತಿಯುನ್ನು 2 ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ.