Job Description: * ಇತ್ತೀಚಿಗೆ ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ( Air India ) ಖರೀದಿಗಾಗಿ ಬಿಡ್ ನಡೆಸಲಾಯಿತು, ಈ ಬಿಡ್ ನಲ್ಲಿ ಅಂತಿಮವಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಖರೀದಿಸಿದೆ ಎಂದು ತಿಳಿದು ಬಂದಿದೆ. * ರಾಷ್ಟ್ರೀಯ ವಾಹಕ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಬಿಡ್'ನ್ನು ಸಾಲ್ಟ್-ಟು-ಸಾಫ್ಟ್ ವೇರ್ ಸಮೂಹವು ಸೆಪ್ಟೆಂಬರ್. 15 ರಂದು ವಿಮಾನಯಾನಕ್ಕಾಗಿ ಅಂತಿಮ ಬಿಡ್ ನೀಡಿತ್ತು, ಇದೀಗ ಈ ಬಿಡ್'ನ್ನು ಟಾಟಾ ಸನ್ಸ್ ಸಂಸ್ಥೆಯು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. * ಪ್ರಸ್ತುತ ಈ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಟಾಟಾ ಗ್ರೂಪ್'ನ ಹಿಡುವಳಿ ಕಂಪನಿಯಾಗಿದೆ, ಭಾರತದಾದ್ಯಂತ ಚಹಾ ತೋಟಗಳು ಮತ್ತು ಉಕ್ಕಿನ ಕಾರ್ಖಾನೆಗಳು ಸೇರಿದಂತೆ ಟಾಟಾ ಸಮೂಹದ ಬಹುಪಾಲು ಷೇರುಗಳನ್ನು ಹೊಂದಿದೆ. * ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್'ನ್ನು 1868 ರಲ್ಲಿ ಟಾಟಾ ಗ್ರೂಪ್, ಜಮ್ಸೆಟ್ಜಿ ಟಾಟಾ ಅವರು ಸ್ಥಾಪಿಸಿದ್ದಾರೆ, ಹಾಗೂ ಇದು ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. * ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್: ಟಾಟಾ ಸಮೂಹ, ಟಾಟಾ ಕನ್ಸಲ್ಟೆನ್ಸಿ ಸೇವೆಗಳು ಎಂಬ ಅಂಗಸಂಸ್ಥೆಗಳನ್ನು ಹೊಂದಿದೆ.