Job Description: * ಭಾರತದ ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾಗಿರುವ ಫ್ಲಿಪ್ಕಾರ್ಟ್ ಇದೀಗ 8 ನೇ ಆವೃತ್ತಿಯ ಬಿಗ್ ಬಿಲಿಯನ್ ಡೇಸ್ ಆರಂಭಿಸಲಿದೆ, ಇದರೊಂದಿಗೆ ಫ್ಲಿಪ್ಕಾರ್ಟ್ ನೇಕಾರರ ಕರಕುಶಲ ವಸ್ತುಗಳ ಮಾರಾಟಕ್ಕೆ 'ಸಮರ್ಥ್' ಯೋಜನೆಗೆ ಅವಕಾಶ ನೀಡಿದೆ. * ಫ್ಲಿಪ್ಕಾರ್ಟ್ ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳು ಹಾಗೂ ನೇಕಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ, ಈ ಯೋಜನೆಯಿಂದಾಗಿ ಇವರ ಜೀವನೋಪಾಯ ಮತ್ತು ವ್ಯವಹಾರವನ್ನು ಬೆಳವಣಿಗೆ ಮಾಡಿಕೊಳ್ಳಲು ಒಂದು ಅವಕಾಶವನ್ನು ಒದಗಿಸಿದೆ. * ಫ್ಲಿಪ್ಕಾರ್ಟ್ ಇದೀಗ ಆನ್ಲೈನ್ನಲ್ಲಿ ಖರೀದಿಸುವ ಗ್ರಾಹಕರಿಗಾಗಿ 'ಆರ್ಟ್ ಫಾರ್ಮ್ಸ್ ಆಫ್ ಇಂಡಿಯಾ' ಎಂಬ ನೂತನ ಪರಿಕಲ್ಪನೆಯಡಿಯಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಿದೆ, ಹಾಗೂ ಈ ವರ್ಷ, 'ಆರ್ಟ್ ಫಾರ್ಮ್ಸ್ ಆಫ್ ಇಂಡಿಯಾ ದೇಶಾದ್ಯಂತ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಕೆ ಮಾಡಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳು ಸಿದ್ಧಪಡಿಸಿರುವ ಉತ್ಪನ್ನಗಳಿಗೆ ಉತ್ತೇಜನ ನೀಡುವದು ಹಾಗೂ ಮಾರುಕಟ್ಟೆಯನ್ನು ಒದಗಿಸುವ ಹೊಣೆಗಾರಿಕೆಯನ್ನು ಬುಡಕಟ್ಟು ಕಲ್ಯಾಣ ಸಚಿವಾಲಯ ಹೊಂದಿದೆ.