Job Description: * ಪ್ರಸ್ತುತ ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಕೋವಿಡ್-19 3 ನೇ ಅಲೆಯು ಎದುರಾಗುವ ಹಿನ್ನಲೆಯಿಂದಾಗಿ 16 ವರ್ಷದೊಳಗಿನ ಮಕ್ಕಳ ದೇಹದಲ್ಲಿ ನಿರೋಧಕ ಶಕ್ತಿಯನ್ನು ವೃದ್ಧಿಸಲು 'ಬಾಲ ರಕ್ಷಾ ಕಿಟ್'ನ್ನು ಅಭಿವೃದ್ಧಿಪಡಿಸಿದೆ. * ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಆಯುಷ್ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. * ಈ 'ಬಾಲ ರಕ್ಷಾ ಕಿಟ್'ನ್ನು ತುಳಸಿ, ಒಣದ್ರಾಕ್ಷಿ, ಅಮೃತಬಳ್ಳಿ, ದಾಲ್ಚಿನ್ನಿ, ಬೇರಿನ ರಸ ಬಳಸಿ ಸಿದ್ದಪಡಿಸಲಾಗಿದೆ, ಹಾಗೂ ಇದು ಸಿರಪ್, ಚ್ಯವನಪ್ರಾಶ, ತೈಲವನ್ನೂ ಒಳಗೊಂಡಿರಲಿದೆ, ಮಕ್ಕಳು ನಿಯಮಿತವಾಗಿ ಇದನ್ನು ಸೇವನೆ ಮಾಡುವದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದೆ ಎಂದು ತಿಳಿಸಿದ್ದಾರೆ. * ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಉತ್ತರಾಖಂಡ್ ನಲ್ಲಿನ ಭಾರತೀಯ ವೈದ್ಯಕೀಯ ಔಷದ ಕಂಪನಿ ಘಟಕದಲ್ಲಿ ಇದನ್ನು ಸಿದ್ದಪಡಿಸಲಾಗಿದೆ ಎಂದು ತಿಳಿಸಲಾಗಿದೆ. * ಅಖಿಲ ಭಾರತ ಆಯುರ್ವೇದ ಸಂಸ್ಥೆಯು ರಾಷ್ಟ್ರೀಯ ಆಯುರ್ವೇದ ದಿನ ನವೆಂಬರ್. 02 ರಂದು ಅಂದಾಜು 10 ಸಾವಿರ 'ಬಾಲ ರಕ್ಷಾ ಕಿಟ್'ಗಳನ್ನು ಉಚಿತವಾಗಿ ವಿತರಣೆ ಮಾಡಲಿದೆ.