Job Description: * ಬೆಂಗಳೂರು ಮಹಾನಗರ ಸಾರಿಗೆ(BMTC)ಯ ವಿದ್ಯುತ್ ಚಾಲಿತ ಬಸ್(ಇ-ಬಸ್)ಗೆ ರಾಜ್ಯ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದ್ದಾರೆ. * ಈ ವಿದ್ಯುತ್ ಚಾಲಿತ ಬಸ್(ಇ-ಬಸ್)ಗೆ ಕೆಂಗೇರಿಯ ಬಸ್ ವಿಭಾಗದಲ್ಲಿ ಚಾಲನೆಯನ್ನು ನೀಡಲಾಗಿದೆ, ಪ್ರಸ್ತುತ ಈ ಬಸ್ ನ್ನು ಉತ್ತರ ಪ್ರದೇಶ ರಾಜ್ಯದ ಜೆಬಿಎಂ ಆಟೋ ಲಿಮಿಟೆಡ್ ಕಂಪನಿ ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ. * ಈ ವಿದ್ಯುತ್ ಚಾಲಿತ ಬಸ್ ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 220 ಕಿಮೀ. ವರೆಗೆ ಸಂಚರಿಸುವ ಸಾಮರ್ಥ್ಯವಿದೆ ಎಂದು ತಿಳಿಸಿದ್ದಾರೆ. * ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಈ ವಿದ್ಯುತ್ ಚಾಲಿತ ಬಸ್ಗಳಿಗಾಗಿ 130 ಕೋಟಿ ರೂ. ಮೀಸಲಿಡಲಾಗಿದೆ, ಡಿಸೆಂಬರ್ ಅಂತ್ಯದವರಗೆ 93 ವಿದ್ಯುತ್ ಚಾಲಿತ ಬಸ್ಗಳು ಸಾರ್ವಜನಿಕರ ಬಳಕೆಗೆ ಲಭ್ಯವಿರಲಿವೆ ಎಂದು ತಿಳಿಸಿದ್ದಾರೆ.