Job Description: * ಫ್ರಾನ್ಸ್'ನ ನ್ಯಾಯಾಲಯವು ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. * ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು 2012 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ಅಕ್ರವಾಗಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪದಡಿ ಇವರಿಗೆ ಫ್ರಾನ್ಸ್ ನ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. * ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ, ಈ ಕಾರಣದಿಂದ ಎಲೆಕ್ಟ್ರಾನಿಕ್ ಟ್ಯಾಗ್ ನೊಂದಿಗೆ ಮನೆಯಲ್ಲಿಯೇ ಶಿಕ್ಷೆಯನ್ನು ಅನುಭವಿಸಬಹುದು ಎಂದು ಫ್ರಾನ್ಸ್ ನ ನ್ಯಾಯಾಲಯದ ಜಡ್ಜ್ ಒಬ್ಬರು ತಿಳಿಸಿದ್ದಾರೆ. * ಮಾಜಿ ಅಧ್ಯಕ್ಷ ಸರ್ಕೋಜಿ ಅವರು 2007 ರಿಂದ 2012 ರ ವರೆಗೂ ಫ್ರಾನ್ಸ್ ಅಧ್ಯಕ್ಷರಾಗಿದ್ದರು. * ಈ ಹಿಂದೆ ನ್ಯಾಯಾಧೀಶರಿಗೆ ಲಂಚ ನೀಡಿಕೆ ಪ್ರಕರಣದಲ್ಲಿ ನಿಕೋಲಸ್ ಸರ್ಕೋಜಿ ಅವರಿಗೆ ಫ್ರಾನ್ಸ್ ನ್ಯಾಯಾಲಯ ಮಾರ್ಚ್ ನಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು, ಆದರೆ ಇವರಿಗೆ ಈ ಜೈಲು ಶಿಕ್ಷೆಯಲ್ಲಿ ಎರಡು ವರ್ಷದ ಶಿಕ್ಷೆ ಅಮಾನತು ಮಾಡಲಾಗಿದೆ, ಕೇವಲ ಒಂದು ವರ್ಷದ ಅವಧಿಗೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.