Job Description: * ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ, ಇದೀಗ ವಿವಿಧ '4' ಹೈಕೋರ್ಟ್ಗಳಿಗೆ 16 ನ್ಯಾಯಮೂರ್ತಿಗಳನ್ನೂ ನೇಮಿಸಲು ಅನುಮೋದನೆ ನೀಡಿದೆ. * ಪ್ರಸ್ತುತ ಬಾಂಬೆ, ಗುಜರಾತ್, ಒರಿಸ್ಸಾ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗಳಿಗೆ ಈ 16 ನ್ಯಾಯಮೂರ್ತಿಗಳ ನೇಮಕವಾಗಲಿದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಕೊಲಿಜಿಯಂನ ಸಭೆಯು 6 ಮಂದಿ ನ್ಯಾಯಾಂಗ ಅಧಿಕಾರಿಗಳು, ಹಾಗೂ 10 ವಕೀಲರನ್ನು ನ್ಯಾಯಮೂರ್ತಿಗಳಾಗಿ ನಿಯೋಜನೆ ಮಾಡಬೇಕೆಂಬ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. * ಪ್ರಸ್ತುತ ಬಾಂಬೆ ಹೈಕೋರ್ಟ್ಗೆ: ಎ.ಎಲ್.ಪಾನ್ಸಾರೆ, ಎಸ್.ಎಸ್.ಮೋರೆ, ಯು.ಎಸ್.ಜೋಶಿ ಫಾಲ್ಕೆ ಮತ್ತು ಬಿ.ಪಿ.ದೇಶಪಾಂಡೆ ಅವರನ್ನು ನೇಮಿಸಲು ಕೊಲಿಜಿಯಂ ಶಿಫಾರಸ್ತು ಮಾಡಿದೆ. * ಒರಿಸ್ಸಾ ಹೈಕೋರ್ಟ್ಗೆ: ವಕೀಲರಾದ ಆದಿತ್ಯ ಕುಮಾರ್ ಮೊಹಾಪಾತ್ರ, ಮೃಗಂಕಾ ಶೇಖರ್ ಸಾಹೂ, ನ್ಯಾಯಾಂಗ ಅಧಿಕಾರಿಗಳಾದ ರಾಧಾಕೃಷ್ಣ ಪಟ್ನಾಯಕ್, ಶಶಿಕಾಂತ ಮಿಶ್ರಾ ಅವರನ್ನು ನೇಮಕ ಮಾಡಲು ಕೊಲಿಜಿಯಂ ಶಿಫಾರಸ್ತು ಮಾಡಿದೆ. * ಗುಜರಾತ್ ಹೈಕೋರ್ಟ್ಗೆ: ವಕೀಲರಾದ ಮೌನ ಮನೀಶ್ ಭಟ್, ಸಮೀರ್ ಜೆ.ದವೆ, ಹೇಮಂತ್ ಎಂ.ಪ್ರಚ್ಚಾಕ್, ಸಂದೀಪ್ ಎನ್.ಭಟ್, ಅನಿರುದ್ಧ ಪ್ರಧ್ಯುಮ್ನ ಮಾಯಿ, ನಿರಲ್ ರಶ್ಮಿಕಾಂತ್ ಮೆಹ್ತಾ, ನಿಶಾ ಮೆಹೆಂದರ ಭಾಯ್ ಥಾಕೋರ್ ಅವರನ್ನು ನೇಮಕ ಮಾಡಲು ಕೊಲಿಜಿಯಂ ಶಿಫಾರಸ್ತು ಮಾಡಿದೆ. * ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ: ನ್ಯಾಯಮೂರ್ತಿಯಾಗಿ ವಕೀಲ ಸಂದೀಪ್ ಮೌದ್ಗಿಲ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸ್ತು ಮಾಡಿದೆ ಎನ್ನಲಾಗಿದೆ.