Job Description: * ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತರಾದ ಭಾರತೀಯ ಹಾಕಿ ತಂಡದ ಸದಸ್ಯ ರೂಪಿಂದರ್ ಪಾಲ್ ಸಿಂಗ್ ಅವರು ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ. * ರೂಪೀಂದರ್ ಪಾಲ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ನಂತರ ಮತ್ತೊಬ್ಬ ಭಾರತೀಯ ಹಾಕಿ ಆಟಗಾರ ಬಿರೇಂದ್ರ ಲಾಕ್ರ ಅವರು ಕೂಡಾ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ. * ಪ್ರಸ್ತುತ ಹಾಕಿ ಇಂಡಿಯಾದ ಟ್ವಿಟರ್ ನ ಅಧಿಕೃತ ಖಾತೆಯಲ್ಲಿ ಲಕ್ರಾ ನಿವೃತ್ತಿಯನ್ನು ಪ್ರಕಟಿಸಲಾಗಿದೆ, ಪ್ರಸ್ತುತ ಇವರು ಒಡಿಶಾದ ಸ್ಟಾರ್ ರಾಷ್ಟ್ರೀಯ ತಂಡದಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ ಎಂದು ಹಾಕಿ ಇಂಡಿಯಾ ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ. * ಇತ್ತೀಚಿಗೆ ಟೋಕಿಯೊದಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಡಿಪೆಂಡರ್ ಲಾಕ್ರ ಅವರು ಕಂಚು ಪದಕ ಗೆದ್ದ ಟೀಂ ಇಂಡಿಯಾದ ಸದಸ್ಯ ಆಟಗಾರರಾಗಿದ್ದರು, ಅಷ್ಟೇ ಅಲ್ಲದೇ, ಈ ಹಿಂದೆ 2014 ರಲ್ಲಿ ಚಿನ್ನದ ಪದಕವನ್ನು ಜಯಿಸಿ ಇಂಚಿಯಾನ್ ಏಷ್ಯನ್ ಗೇಮ್ಸ್ ತಂಡದ ಆಟಗಾರರಾಗಿದ್ದರು, ಹಾಗೂ 2018 ಜಕಾರ್ತದಲ್ಲಿ ಕಂಚು ಜಯಿಸಿದ್ದರು.