Job Description: * ಇದೀಗ ರಾಜಸ್ಥಾನ ಸರ್ಕಾರವು ತನ್ನ ರಾಜ್ಯದಲ್ಲಿ ಇದೇ ಅಕ್ಟೋಬರ್ 1 ರಿಂದ 2022 ರ ಜನವರಿ 31 ರವರೆಗೆ ಪಟಾಕಿ ಮಾರಾಟ ಹಾಗೂ ಸಿಡಿಸುವದನ್ನು ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದೆ. * ಇತ್ತೀಚಿಗೆ ದೆಹಲಿಯಲ್ಲಿ ಕೂಡ 3 ತಿಂಗಳ ವರೆಗೆ ಪಟಾಕಿ ಸಿಡಿಸುವದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ಆದೇಶ ಹೊರಡಿಸಿದೆ. * ಪ್ರಸ್ತುತ ದೀಪಾವಳಿ ಹಾಗೂ ದಸರಾ ಹಬ್ಬಗಳ ಆಚರಣೆಯಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ವಿಪರೀತ ವಾಯುಮಾಲಿನ್ಯ ಉಂಟಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ, ಒಂದು ವೇಳೆ ರಾಜಸ್ಥಾನ ಸರ್ಕಾರದ ಈ ಆದೇಶದ ಮೀರಿ ಪಟಾಕಿಯ ಮಾರಾಟ ಹಾಗೂ ಸಿಡಿಸುವುದನ್ನು ಕಂಡು ಬಂದರೆ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವದು ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ. * ಒಡಿಶಾ ರಾಜ್ಯದಲ್ಲಿಯೂ ಕೂಡ ದಸರಾ, ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಯನ್ನು ಮಾರಾಟ ಹಾಗೂ ಸಿಡಿಸುವುದಕ್ಕೆ ನಿಷೇಧ ಹೇರಲಾಗಿದೆ.