Job Description: * ಪ್ರಸ್ತುತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು 'ಅಮುಲ್ ಹನಿ' ಯನ್ನು ಬಿಡುಗಡೆ ಮಾಡಿದ್ದಾರೆ, ಇದು ಗುಜರಾತ್ ಸಹಕಾರಿ ಹಾಲು ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ನ ಉತ್ಪನ್ನವಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಗುಜರಾತ್ ಸಹಕಾರಿ ಹಾಲು ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಈ ಉತ್ಪನ್ನವನ್ನು 'ರಾಷ್ಟ್ರೀಯ ಬೀ ಬೋರ್ಡ್' ಸಹಭಾಗಿತ್ವದಲ್ಲಿ ಆರಂಭಿಸಿದೆ, ಇದು ಸಣ್ಣ ರೈತರ ಆದಾಯವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. * ಭಾರತದಲ್ಲಿ ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನು ಮಿಷನ್'ನ್ನು ಜಾರಿಗೆ ತರಲಾಗುತ್ತಿದೆ, ಇದರ ಅಡಿಯಲ್ಲಿ ಜೇನುತುಪ್ಪದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, 5 ಬೃಹತ ಪ್ರಮಾಣದ ಪ್ರಾದೇಶಿಕ ಜೇನು ಪರೀಕ್ಷಾ ಪ್ರಯೋಗಾಲಯ ಹಾಗೂ 100 ಮಿನಿ ಜೇನು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವರು ತಿಳಿಸಿದ್ದಾರೆ. * ರಾಷ್ಟ್ರೀಯ ಬೀ ಮಂಡಳಿ (NBB)ಯನ್ನು ಸೊಸೈಟಿಗಳ ನೋಂದಣಿಯನ್ನು 1860 ರ ಕಾಯಿದೆ ಅಡಿಯಲ್ಲಿ ಇದನ್ನು ಒಂದು ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟದ ಸೊಸೈಟಿಯಾಗಿ 2000 ರಲ್ಲಿ ಸ್ಥಾಪಿಸಲಾಗಿದೆ. * ಆತ್ಮ ನಿರ್ಭರ ಭಾರತ್ ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ 'ಸಿಹಿ ಕ್ರಾಂತಿ' ಗುರಿಯನ್ನು ಸಾಧಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನು ಮಿಷನ್'ನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.