Job Description: * ಪ್ರಸ್ತುತ ಇ-ಕಾಮರ್ಸ್ ದೈತ್ಯ ಸಂಸ್ಥೆಯಾಗಿರುವ ಅಮೆಜಾನ್ ಇಂಡಿಯಾ ಇದೀಗ ಭಾರತದಲ್ಲಿ 'ಅಮೆಜಾನ್ ಫ್ಯೂಚರ್ ಇಂಜಿನಿಯರ್'ನ್ನು ಪ್ರಾರಂಭಿಸುವದಾಗಿ ಘೋಷಣೆ ಮಾಡಿದೆ. * ಅಮೆಜಾನ್ ಫ್ಯೂಚರ್ ಪ್ರೋಗ್ರಾಮ್ ಇದು ಜಾಗತಿಕ ಕಂಪ್ಯೂಟರ್ ವಿಜ್ಞಾನ ಶಿಕ್ಷಣ ಕಾರ್ಯಕ್ರಮವಾಗಿದೆ. * ಭಾರತದ ಕಡಿಮೆ ಸಮುದಾಯಗಳ ವಿದ್ಯಾರ್ಥಿಗಳಿಗೆ ಅಮೆಜಾನ್ ಫ್ಯೂಚರ್ ಇಂಜಿನಿಯರ್ ಪ್ರೋಗ್ರಾಂ ವಿಶೇಷವಾಗಿ ಕಂಪ್ಯೂಟರ್ ವಿಜ್ಞಾನ, ಉತ್ತಮ ಗುಣಮಟ್ಟದ ಕಂಪ್ಯೂಟರ್ ವಿಜ್ಞಾನ ಶಿಕ್ಷಣಕ್ಕೆ ಪ್ರವೇಶ ಒದಗಿಸಿಕೊಡುತ್ತದೆ. * ಅಮೆಜಾನ್ ಫ್ಯೂಚರ್ ಪ್ರೋಗ್ರಾಮ್ ಆರಂಭವಾದ ಮೊದಲನೇ ವರ್ಷದಲ್ಲಿ ಭಾರತದ 7 ರಾಜ್ಯಗಳ 900 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶಗಳನ್ನು ಒದಗಿಸಿಕೊಡಲಿದೆ ಎಂದು ತಿಳಿಸಿದೆ. * ಅಮೆಜಾನ್ ಇಂಡಿಯಾ ಜಾಗತಿಕ ಜ್ಞಾನ ಪಾಲುದಾರ ಕೋಡ್ ಓಆರ್ಜಿ ಸಹಭಾಗಿತ್ವದಲ್ಲಿ ಆರಂಭಿಸಲಿದೆ, ಇದೊಂದು ಕಂಪ್ಯೂಟರ್ ವಿಜ್ಞಾನ ಶಿಕ್ಷಣಕ್ಕೆ ಮಹತ್ವ ನೀಡುವ ಜಾಗತಿಕ ಲಾಭರಹಿತ ಸಂಸ್ಥೆಯಾಗಿದೆ.