Job Description: * ಪ್ರಸ್ತುತ ಅಮೇರಿಕದ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಖ್ ಸಮುದಾಯದ ಲೆಫ್ಟಿನೆಂಟ್ ಸುಕ್ಬೀರ್ ತೂರ್ ಅವರಿಗೆ ಟರ್ಬನ್ ಧರಿಸಲು ಅಮೇರಿಕ ನೌಕಾಪಡೆ ಅನುಮತಿ ನೀಡಿದೆ. * ಪ್ರಸ್ತುತ ಅಮೇರಿಕದ ಇತಿಹಾಸದಲ್ಲಿ ಅಂದರೆ 246 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಈ ವಿನಾಯಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಸಿಖ್ ಸಮುದಾಯದ ಲೆಫ್ಟಿನೆಂಟ್ ಸುಕ್ಬೀರ್ ತೂರ್ ಅವರು ಅಮೇರಿಕ ಸೇನೆಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಇದೀಗ ಇವರಿಗೆ ಟರ್ಬನ್ ಧರಿಸಲು ಅಮೇರಿಕ ನೌಕಾಪಡೆ ಅನುಮತಿ ನೀಡಿದೆ, ಆದರೆ ಸಂಘರ್ಷ ನಡೆಯುವ ಸಂಧರ್ಭದಲ್ಲಿ ಕರ್ತವ್ಯದಲ್ಲಿರುವಾಗ ಹಾಗೂ ಸಾರ್ವಜನಿಕರು ನೋಡುವ ಕಾರ್ಯಕ್ರಮದಲ್ಲಿ ಟರ್ಬನ್ ಧರಿಸಲು ಅನುಮತಿವಿಲ್ಲ ಎಂಬ ಷರತ್ತುನ್ನು ಹೇರಿದೆ. * ಪ್ರಸ್ತುತ ಅಮೇರಿಕದ ವಾಯುಪಡೆ ಹಾಗೂ ಭೂಸೇನೆಯಲ್ಲಿ ಸುಮಾರು 100 ರಷ್ಟು ಸಿಖ್ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ, ಇದೀಗ ಇವರಿಗೆ ಗಡ್ಡ ಬಿಡಲು ಹಾಗೂ ಟರ್ಬನ್ ಧರಿಸಲು ಅನುಮತಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.