Job Description: * ವೆಸ್ಟ್ ಇಂಡೀಸ್ ತಂಡದ ಕಿರನ್ ಪೊಲ್ಲಾರ್ಡ್ ಅವರು ಟಿ20 ಕ್ರಿಕೆಟ್'ನಲ್ಲಿ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ, ಅದುವೇ ಟಿ20ಯಲ್ಲಿ 10,000 ರನ್, ಮತ್ತು 300 ವಿಕೆಟ್ ಪಡೆದಿರುವ ಸಾಧನೆಯಾಗಿದೆ, ಪ್ರಸ್ತುತ ಈ ಸಾಧನೆಯನ್ನು ಮಾಡಿರುವ ಮೊದಲ ಮತ್ತು ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. * ಇತ್ತೀಚಿಗೆ ಅಬುದಾಬಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲಿ ಕಿರನ್ ಪೊಲ್ಲಾರ್ಡ್ 300 ವಿಕೆಟ್ ಗಳನ್ನೂ ಪಡೆದುಕೊಂಡು ವಿಶ್ವದಾಖಲೆ ಬರೆದಿದ್ದಾರೆ. * ಕಿರನ್ ಪೊಲ್ಲಾರ್ಡ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಹಾಗೂ ವಿಶ್ವದ ವಿವಿಧ ದೇಶಗಳ 25 ಕ್ಕೂ ಅಧಿಕ ಫ್ರಾಂಚೈಸಿ ತಂಡಗಳ ಟಿ20 ಕ್ರಿಕೆಟ್'ನಲ್ಲಿ ಆಟವಾಡಿದ್ದಾರೆ. * ಒಟ್ಟಾರೆ ಕಿರನ್ ಪೊಲ್ಲಾರ್ಡ್ ಅವರು 565 ಟಿ20 ಪಂದ್ಯಗಳಲ್ಲಿ ಆಟವಾಡಿ 11 ಸಾವಿರಕ್ಕೂ ಅಧಿಕ ರನ್ ಗಳನ್ನೂ ಕಲೆಹಾಕುವದರ ಜೊತೆಗೆ 300 ವಿಕೆಟ್ ಗಳನ್ನೂ ಪಡೆದಿದ್ದಾರೆ.