Job Description: * ಪ್ರಸ್ತುತ ದೆಹಲಿಯಲ್ಲಿ 2022 ರ ಜನೇವರಿ. 01 ರವರೆಗೆ ಪಟಾಕಿ ಹಚ್ಚುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ಆದೇಶ ಹೊರಡಿಸಿದೆ, ಹಾಗೂ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಹಾಗೂ ಉಪ ಆಯುಕ್ತರಿಗೆ ತಿಳಿಸಿದ್ದಾರೆ. * ಈ ಹಿಂದೆ ಹಸಿರು ಪಟಾಕಿಗಳಿಗೆ ಅವಕಾಶವನ್ನು ಒದಗಿಸಲಾಗಿತ್ತು, ಇದೀಗ ಆ ಪಟಾಕಿಗಳನ್ನು ಸಿಡಿಸುವದಕ್ಕೂ ಅವಕಾಶವನ್ನು ನೀಡಲಾಗುವದಿಲ್ಲ ಎಂದು ಡಿಪಿಸಿಸಿ ಮಾಹಿತಿ ನೀಡಿದೆ. * ಪ್ರಸ್ತುತ ದೆಹಲಿಯಲ್ಲಿನ ಅತ್ಯಧಿಕವಾದ ವಾಯುಮಾಲಿನ್ಯದಿಂದಾಗಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ದೆಹಲಿಯಲ್ಲಿನ ಈ ಮಾಲಿನ್ಯದಿಂದ ಆರೋಗ್ಯವಾಗಿರುವ ಜನರಿಗೂ ಕೂಡಾ ಉಸಿರಾಟದ ಸಮಸ್ಯೆಗಳು ಎದುರಾಗುವ ಅಪಾಯವಿದೆ, ಹಾಗೂ ಶ್ವಾಸಕೋಶ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆ ಇರುವ ಜನರಿಗೆ ಗಂಭೀರ ಸಮಸ್ಯೆಗಳನ್ನು ಎದುರಾಗಲಿವೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ಎಚ್ಚರಿಕೆಯನ್ನು ನೀಡಿದೆ.