Job Description: * ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಸರ್ಕಾರಿ ಶಾಲೆಗಳಲ್ಲಿ 'ದೇಶಭಕ್ತಿ ಪಾಠ'ವನ್ನು ಪ್ರಾರಂಭಿಸಿದ್ದಾರೆ. * ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೇಶ ಭಕ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿನ ಛತ್ರಸಾಲ ಸ್ಟೇಡಿಯಂನಲ್ಲಿ ಈ ದೇಶಭಕ್ತಿ ಪಾಠದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. * ಪ್ರಸ್ತುತ ದೇಶಭಕ್ತಿ ಪಾಠಗಳ ಭೋಧನೆಯಿಂದಾಗಿ ಪ್ರತಿ ಮಗುವಿನಲ್ಲಿಯೂ ನಿಜವಾದ ದೇಶಭಕ್ತಿ ಹುಟ್ಟುತ್ತದೆ ಎಂದಿದ್ದಾರೆ, ಈ ದೇಶಭಕ್ತಿ ಪಾಠಗಳ ಭೋಧನೆಯಿಂದಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರದ ಅಭಿವೃದ್ಧಿ ಹಾಗೂ ರಾಷ್ಟ್ರವನ್ನು ಮುನ್ನಡೆಸುವ ಶಕ್ತಿ ಮಕ್ಕಳಲ್ಲಿ ಹೆಚ್ಚಲಿದೆ ಎಂದಿದ್ದಾರೆ. * ಪ್ರಸ್ತುತ ಈ ದೇಶಭಕ್ತಿ ಪಾಠಗಳನ್ನೂ 12 ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ಭೋದನೆ ಮಾಡಲಾಗುತ್ತದೆ, * ದೇಶಭಕ್ತಿ ಪಾಠವನ್ನು ಶಿಶುವಿಹಾರ ದಿಂದ 5 ನೇ ತರಗತಿ, ಮತ್ತು 6 ರಿಂದ 8 ನೇ ತರಗತಿ ವರೆಗೆ, ಹಾಗೂ 9 ರಿಂದ 12 ನೇ ತರಗತಿಗಳ ವರೆಗೆ 3 ವಿಭಾಗಗಳನ್ನು ರಚಿಸಲಾಗಿದೆ, ಅಷ್ಟೇ ಅಲ್ಲದೇ ಬೋಧನೆಗೆ ಸರಳವಾಗುವ ನಿಟ್ಟಿನಲ್ಲಿ 2 ಕೈಪಿಡಿಗಳನ್ನೂ ನೀಡಲಾಗುತ್ತದೆ. ಆ ಕೈಪಿಡಿಗಳು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶಭಕ್ತರ ಸುಮಾರು 100 ಕತೆಗಳು ಹೊಂದಿರಲಿವೆ ಎಂದಿದ್ದಾರೆ.