Job Description: * ಪ್ರಸ್ತುತ ಫುಮಿಯೋ ಕಿಶಿಡಾ ಅವರು ಜಪಾನ್ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ, ಇದೀಗ ಚುನಾವಣೆಯ ಫಲಿತಾಂಶದ ಪ್ರಕಾರ ಫುಮಿಯೋ ಕಿಶಿಡಾ ಜಪಾನಿನ ಮುಂದಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. * ಈ ಮೊದಲು ಫುಮಿಯೋ ಕಿಶಿಡಾ ಅವರು ಎಲ್ಡಿಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ 2012 ರಿಂದ 17 ರ ವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ, ಅದೇ ಸಂಧರ್ಭದಲ್ಲಿ ದಕ್ಷಿಣ ಕೊರಿಯಾ ದೇಶದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು, ಅಷ್ಟೇ ಅಲ್ಲದೇ ಇವರು ಅಧಿಕಾರದಲ್ಲಿರುವಾಗ ಸಲಿಂಗ ವಿವಾಹಕ್ಕೆ ಬೆಂಬಲವನ್ನು ನೀಡಿದ್ದರು. * ಈ ಹಿಂದೆ 2020 ರಲ್ಲಿ ಯೋಶಿಹಿಡೆ ಸುಗಾ ಅವರು ಪ್ರಧಾನಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದರು, ಆದರೆ ಇದೀಗ ಜಪಾನ್ ದೇಶವು ಮತ್ತೊಬ್ಬ ಪ್ರಧಾನಿಯನ್ನು ಆಯ್ಕೆ ಮಾಡಿದೆ. * ಜಪಾನ್ ದೇಶವು 8 ವರ್ಷಗಳಲ್ಲಿ ಮೊದಲ ಬಾರಿ 2020 ರಲ್ಲಿ ನಾಯಕತ್ವ ಬದಲಾವಣೆಯನ್ನು ಮಾಡಿದೆ, ಆದರೆ ಇದೀಗ ಮತ್ತೇ ಪ್ರಧಾನಿಯನ್ನು ಬದಲಾವಣೆ ಮಾಡುತ್ತಿದೆ.