Job Description: * ಪ್ರಸ್ತುತ ಉತ್ತರಾಖಂಡ ರಾಜ್ಯದ ಅರಣ್ಯ ಇಲಾಖೆಯು ತನ್ನ ರಾಜ್ಯದ ಮೊದಲ ಪಲ್ಮೆಟಮ್ (Palmetum)ನ್ನು ಉದ್ಘಾಟಣೆ ಮಾಡಿದೆ. ಈ ಪಲ್ಮೆಟಮ್ ನ್ನು ಉತ್ತರಾಖಂಡ ರಾಜ್ಯದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. * ಈ ಪಾಲ್ಮೆಟಮ್ ಸುಮಾರು 110 ಜಾತಿಯ ತಾಳೆಗರಿಗಳನ್ನು ಹೊಂದಿದೆ, ಹಾಗೂ ಇದು ಉತ್ತರ ಭಾರತದಲ್ಲಿ ಅತೀ ದೊಡ್ಡ ಪಾಲ್ಮೆಟಮ್ ಆಗಿದೆ, ಇದನ್ನು 3 ಎಕರೆ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗಿದೆ. * ಪ್ರಸ್ತುತ ಪಾಲ್ಮೆಟಮ್ ನ ಸಂರಕ್ಷಣೆ ಹಾಗೂ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಲು ಹಾಗೂ ವಿವಿಧ ತಾಳೆ ಜಾತಿಗಳ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಉದ್ಘಾಟಣೆ ಮಾಡಲಾಗಿದೆ. * ಉತ್ತರಾಖಂಡದ ತಾಳೆ ಜಾತಿಗಳು: ಪ್ರಸ್ತುತ ಪಾಲ್ಮೇಟಂ ಉತ್ತರಾಖಂಡಕ್ಕೆ ಸ್ಥಳೀಯವಾದ ಒಂದು ಪಾಮ್ ಪ್ರಭೇದವಾಗಿದೆ, ಹಾಗೂ ಇದನ್ನು ಟಾಕಿಲ್ ಪಾಮ್ ಎಂದು ಕರೆಯುತ್ತಾರೆ. * ಉತ್ತರಾಖಂಡ ರಾಜ್ಯದ ಜೀವವೈವಿಧ್ಯ ಮಂಡಳಿಯು ಈ ಪ್ರಭೇದವನ್ನು ಅಪಾಯದ ಜಾತಿ ಎಂದು ಘೋಷಣೆ ಮಾಡಿದೆ, ಪ್ರಸ್ತುತ ಪಾಲ್ಮೆಟಂನಲ್ಲಿ ಅಳಿವಿನಂಚಿನಲ್ಲಿರುವ ಇತರ ಜಾತಿಗಳು ಪೋನಿಟೇಲ್ ಪಾಮ್, ಬಾಟಲ್ ಪಾಮ್, ರೆಡ್ನೆಕ್ ಪಾಮ್ ಮತ್ತು ಸ್ಪಿಂಡಲ್ ಪಾಮ್'ಗಳು ಸೇರಿಕೊಂಡಿವೆ.