Job Description: * ಪ್ರಸ್ತುತ ಭಾರತೀಯ ವಾಯುಪಡೆಯ ಆಕಾಶ್ ಕ್ಷಿಪಣಿಯ ನವೀಕರಿಸಲಾಗಿರುವ ಹೊಸ ಮಾದರಿ 'ಆಕಾಶ್ ಪ್ರೈಮ್' ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಗೊಳಿಸಿದೆ. * ಈ ಆಕಾಶ್ ಪ್ರೈಮ್ ಕ್ಷಿಪಣಿಯು ನಿರ್ದಿಷ್ಟ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದಾಗಿ ಭಾರತೀಯ ಕ್ಷಿಪಣಿ ವಲಯವು ಮತ್ತಷ್ಟು ಬಲಿಷ್ಠವಾದಂತಾಗಿದೆ. * ಒಡಿಶಾ ರಾಜ್ಯದ ಚಂಡೀಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯ, ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಈ ಆಕಾಶ್ ಪ್ರೈಮ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. * ಪ್ರಸ್ತುತ ಈ ಆಕಾಶ್ ಪ್ರೈಮ್ ಕ್ಷಿಪಣಿಯು ಶತ್ರು ಪಡೆಗಳ ಮಾನವ ರಹಿತ ವೈಮಾನಿಕ ಗುರಿಯನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು DRDO ಮಾಹಿತಿಯನ್ನು ನೀಡಿದೆ, ಅಷ್ಟೇ ಅಲ್ಲದೇ ಈಗಿನ ಆಕಾಶ್ ಕ್ಷಿಪಣಿ ವ್ಯವಸ್ಥೆಗೆ ಇದು ಹೊಸದಾಗಿ ಸೇರಿಕೊಂಡಿದೆ. * ಪ್ರಸ್ತುತ ಭಾರತೀಯ ವಾಯುಪಡೆಯು ಈ ಆಕಾಶ್ ಕ್ಷಿಪಣಿಯನ್ನು ಬಳಸುತ್ತಿದೆ, ಈ ಹೊಸ ಮಾದರಿಯ ಆಕಾಶ್ ಪ್ರೈಮ್ ಕ್ಷಿಪಣಿಯಿಂದಾಗಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.